ಆತ್ಮಾಭಿಮಾನದ ಕಿಚ್ಚು ಹೊತ್ತಿಸಿದ ನೇತಾಜಿ

SVR NETAJI
Published on

ಸವಣೂರ: ಅಪ್ರತಿಮ ದೇಶಪ್ರೇಮಿ ನೇತಾಜಿ ಸುಭಾಷ್ ಚಂದ್ರಬೋಸ್ ಜಯಂತ್ಯುತ್ಸವವನ್ನು ತಾಲೂಕಿನ ಯಲವಿಗಿ ತಾಂಡಾ (ಪರಮವಾಡಿ)ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಚರಿಸಲಾಯಿತು.

ಶಾಲಾ ಪ್ರಭಾರ ಮುಖ್ಯಗುರು ಎ.ಪಿ. ಅಂಗಡಿ ಮಾತನಾಡಿ, ಸ್ವಾತಂತ್ರ್ಯ ಎಂಬುದು ಯಾರೂ ಕೊಡುವಂಥ ಸರಕಲ್ಲ, ಅದು ನಾವು ಪಡೆದುಕೊಳ್ಳಬೇಕಾದದ್ದು ಎನ್ನುತ್ತ ಭಾರತೀಯರ ಎದೆಯಲ್ಲಿ ಆತ್ಮಾಭಿಮಾನದ ಕಿಚ್ಚು ಹೊತ್ತಿಸಿದ ನೇತಾಜಿ ಸುಭಾಸ ಚಂದ್ರ ಬೋಸ್ ಅವರನ್ನು ಸದಾ ಸ್ಮರಿಸಬೇಕು ಎಂದರು.

ಮುಖ್ಯಗುರು ಎಸ್.ಎನ್. ಶಿಡೇನೂರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ರತ್ನಾ ಯರಗಲ್, ಎಫ್.ಆರ್. ಹಿರೇಮಠ, ಎಸ್.ಜಿ. ಕೆರೂರ, ಪದ್ಮಾ ನಡಕಟ್ಟಿನ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net