

ಕುಂದಾಪುರ: ಮರವಂತೆಯ ಕರಾವಳಿಮಿತ್ರ ಮಂಡಳಿ ಆಶ್ರಯದಲ್ಲಿ ಮರವಂತೆ ಶ್ರೀರಾಮ ಮಂದಿರ ಕ್ರೀಡಾಂಗಣದಲ್ಲಿ ದ್ವಿತೀಯ ವರ್ಷದ ಮರವಂತೆ ಹಾಗೂ ನಾವುಂದ ವ್ಯಾಪ್ತಿಯ ‘ಮಾಟುಬಲೆ ಮೀನುಗಾರರ ಕ್ರಿಕೆಟ್’ ಪಂದ್ಯಾವಳಿಯಲ್ಲಿ ಜಯಪರಮೇಶ್ವರಿ ದೋಣಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ನಲ್ಲಿ ಜಯಪರಮೇಶ್ವರಿ ದೋಣಿ ತಂಡ ಧರ್ಮ ದೇವತೆ ದೋಣಿಯ ತಂಡವನ್ನು ಸೋಲಿಸಿತು.
ಮರವಂತೆ ಶ್ರೀರಾಮ ಮಂದಿರದ ಅಧ್ಯಕ್ಷ ಸುರೇಶ್ ಖಾರ್ವಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಂದರು ಮಾರ್ಕೆಟಿಂಗ್ ಸಮಿತಿ ಅಧ್ಯಕ್ಷ ವೆಂಕಟರಮಣ ಖಾರ್ವಿ, ಮರವಂತೆ ಮಹಿಳಾ ಮೀನುಗಾರರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ, ರಾಮ ಮಂದಿರ ಮಾಜಿ ಅಧ್ಯಕ್ಷರಾದ ಸೋಮಯ್ಯ ಖಾರ್ವಿ, ಪಿ.ಚಂದ್ರ ಖಾರ್ವಿ, ಮಂದಿರದ ಉಪಾಧ್ಯಕ್ಷ ನಾರಾಯಣ ಖಾರ್ವಿ, ಕೆ.ನಾಗರಾಜ್ ಖಾರ್ವಿ, ಸಂಘದ ಕಾರ್ಯದರ್ಶಿ ರಮೇಶ್, ಬನರಾಜ್, ಶೇಖರ್ ಖಾರ್ವಿ ಉಪಸ್ಥಿತರಿದ್ದರು.