

ರಟ್ಟಿಹಳ್ಳಿ: ತಾಲೂಕಿನ ನೇಶ್ವಿ ಗ್ರಾಮ ಪಂಚಾಯಿತಿ 2ನೇ ಅವಧಿಗೆ ಶಶಿಕಲಾ ದೊಡ್ಮನಿ ಅಧ್ಯಕ್ಷರಾಗಿ, ಸವಿತಾ ಕುಂಬಾರ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ ಮೀಸಲಿರಿಸಿದ್ದು, ಶಶಿಕಲಾ ದೊಡ್ಮನಿ ಮತ್ತು ಮೀನಾಕ್ಷಿ ಸಾವಜ್ಜಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಬಳಿಕ ಮೀನಾಕ್ಷಿ ಸಾವಜ್ಜಿ ನಾಮಪತ್ರ ಹಿಂಪಡೆದಿದ್ದರಿಂದ ಶಶಿಕಲಾ ಅವರನ್ನು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ‘ಅ’ ವರ್ಗ ಮಹಿಳೆ ಮೀಸಲಾಗಿದ್ದು, ಸವಿತಾ ಕುಂಬಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಉಪಾಧ್ಯಕ್ಷೆಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಕೆ.ಎಚ್. ಮಾರತೆಪ್ಪ ತಿಳಿಸಿದರು.
ಪಿಡಿಒ ಗಣೇಶ ಬಿದರಿ ಗ್ರಾಪಂ ಸದಸ್ಯರಾದ ಮಹೇಶಪ್ಪ ಚಳಗೇರಿ, ಶಿದ್ದನಗೌಡ ಪಾಟೀಲ, ಸೋಮಪ್ಪ ಕಣಗೋಟಗಿ, ಸುಶೀಲಾ ದೊಡ್ಮನಿ, ಲಕ್ಷ್ಮವ್ವ ಮಡಿವಾಳರ, ಶಿವಪ್ಪ ಬನ್ನಿಕೋಡ, ರವಿ ಕಣಗೋಟಗಿ ಗ್ರಾಪಂ ಸಿಬ್ಬಂದಿ, ಮುಖಂಡರಾದ ರವೀಂದ್ರ ಬಣಕಾರ, ಜಿಪಂ ಮಾಜಿ ಸದಸ್ಯ ಎನ್.ಎಂ. ಈಟೇರ, ಮಾಲತೇಶ ಬಕ್ಕೂರ, ಸುಶೀಲಾ ದೊಡ್ಮನಿ, ಇತರರು ಉಪಸ್ಥಿತರಿದ್ದರು.