ನೇಸರಗಿಗೆ ವಕ್ಕರಿಸಿದ ಕರೊನಾ

12nsg1-Web
ನೇಸರಗಿ ಗ್ರಾಮದಲ್ಲಿ ಕರೊನಾ ವೈರಸ್ ಸೋಂಕಿತನ ಮನೆಯ ಓಣಿಯನ್ನು ಸೀಲ್‌ಡೌನ್ ಮಾಡಿರುವುದು.
Published on

ನೇಸರಗಿ: ಗ್ರಾಮದ ವ್ಯಾಪಾರಿ ಓರ್ವನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಭಾನುವಾರ ಆತನ ಪತ್ನಿ, ಮಗಳನ್ನು ಬೈಲಹೊಂಗಲ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿದೆ.

ಸ್ಥಳೀಯ ವ್ಯಾಪಾರಿ ಗುಜರಾತ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಲ್ಲಿ ವ್ಯಾಪಾರಕ್ಕಾಗಿ ಹೋದಾಗ ಕರೊನಾ ಅಂಟಿದೆ ಎನ್ನಲಾಗಿದೆ. 15 ದಿನಗಳ ಹಿಂದೆ ಬೆಳಗಾವಿಯಲ್ಲಿ ಚಿಕಿತ್ಸೆಗೆ ತೆರಳಿದಾಗ ಡೆಂೆ ದೃಢಪಟ್ಟಿತ್ತು. ಹೀಗಾಗಿ ಬೆಳಗಾವಿಯಲ್ಲಿ ಇರಿಸಿಕೊಂಡು ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಆತನಿಗೆ ಇದೀಗ ಕರೊನಾ ಪಾಸಿಟಿವ್ ದೃಢಪಟ್ಟಿದೆ.

ಸೋಂಕಿತನ ಮನೆಯ ಸಮೀಪದ 17 ಜನರನ್ನು ಹೋಂ ಕ್ವಾರೈಂಟನ್ ಮಾಡಲಾಗಿದೆ. ಬಜಾರ್ ಓಣಿಗೆ ಔಷಧ ಸಿಂಪಡಣೆ ಮಾಡಿ, ಸೀಲ್‌ಡೌನ್ ಮಾಡಲಾಗಿದೆ. ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್. ಸಿದ್ದಣ್ಣವರ, ಗ್ರಾ.ಪಂ ಅಧ್ಯಕ್ಷ ಸತಾರ ಮೊಕಾಶಿ, ಪಿಡಿಒ ಸೌಮ್ಯಾ, ಪಿಎಸ್‌ಐ ವೈ.ಎಲ್. ಶೀಗಿಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net