

ಶ್ರೀರಂಗಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ಬ್ರಹ್ಮಪುರ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಸ್ಪರ್ಶದಿಂದ ಹಸು ಮೃತಪಟ್ಟ ಹಿನ್ನೆಲೆಯಲ್ಲಿ ಹಸುವಿನ ಮಾಲೀಕರಾದ ಗಾರೆ ಸಿದ್ದಯ್ಯ ಅವರ ಪತ್ನಿ ಲಕ್ಷ್ಮಮ್ಮ ಅವರಿಗೆ ಎನ್.ಶಂಕರೇಗೌಡಗೌಡ ಚಾರಿಟಬಲ್ ಟ್ರಸ್ಟ್ ಸ್ಥಾಪಕ ಇಂಡುವಾಳು ಸಚ್ಚಿದಾನಂದ ವೈಯಕ್ತಿಕವಾಗಿ ಪರಿಹಾರ ನೀಡಿದರು.
ಬಳಿಕ ಸೆಸ್ಕ್ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಇಂಡುವಾಳು ಸಚ್ಚಿದಾನಂದ ಅವರು ಸರ್ಕಾರದಿಂದಲೂ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ಮೇಳಾಪುರ ಪಿಎಸಿಎಸ್ ಮಾಜಿ ಅಧ್ಯಕ್ಷ ಎಂ.ಜೆ. ಪುಟ್ಟರಾಜು, ಟಿಎಪಿಸಿಎಂಎಸ್ ನಿರ್ದೇಶಕ ಶಿವಕುಮಾರ್, ಮೇಳಾಪುರ ಗ್ರಾಪಂ ಅಧ್ಯಕ್ಷ ಬೆಟ್ಟೇಗೌಡ, ಸದಸ್ಯ ಹೊಸೂರು ಧನರಾಜ್, ಮಹದೇವಪುರ ಶಶಿಕುಮಾರ್, ಮುಖಂಡರಾದ ನಗುವನಹಳ್ಳಿ ಮಹದೇವಸ್ವಾಮಿ, ವೆಂಕಟೇಶ್, ಪ್ರದೀಪ್, ವಿರೂಪಾಕ್ಷ, ಸಚಿನ್, ಭರತ, ನವೀನ್, ಚಂದನ್, ಬ್ರಹ್ಮಪುರ ಮಂಜುನಾಥ್, ಬೆಳವಾಡಿ ರಾಜೇಶ್ ಇತರರಿದ್ದರು.