

ಆರ್ಡಿ: ಶೇಡಿಮನೆ ಗ್ರಾಮದ ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜ.19ರಂದು ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆಯಲಿರುವ ನೆರವಿನ ನೆರಳು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದಲ್ಲಿ ಅರ್ಚಕ ಅಭಿಷೇಕ್ ಬಾಯರಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ನೆರಳು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ಕ್ರಮಧಾರಿ, ಪ್ರಕಾಶ ಶೆಟ್ಟಿ, ಸುಧಾಕರ ಶೆಟ್ಟಿ, ಸುರೇಶ ಶೆಟ್ಟಿ, ಸುಧಾಕರ ಪೂಜಾರಿ, ಗೋಪಾಲ ಕುಲಾಲ, ಭಾಸ್ಕರ ಪೂಜಾರಿ, ಮಂಜುನಾಥ ಉಪಸ್ಥಿತರಿದ್ದರು.