ಬಡವರು ಕಲಿಯುವ ಶಾಲೆಗಳಲ್ಲಿ ಎನ್​ಇಪಿ ಬೇಡವೇ: ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ

Kota Srinivas poojari
Published on

ಉಡುಪಿ: ಡಿಕೆಶಿ, ರ್ಖಗೆ, ಪರಮೇಶ್ವರ್​ ಸೇರಿದಂತೆ ಹಿರಿಯ ಕಾಂಗ್ರೆಸ್​ ನಾಯಕರು ನಡೆಸುವ ಖಾಸಗಿ ಖಾಸಗಿ ಶಾಲೆಗಳಲ್ಲಿ ಎನ್​ ಇಪಿ ಇದೆ. ಆದರೆ ಬಡವರು ಕಲಿಯುವ ಸರ್ಕಾರಿ ಶಾಲೆಗಳಲ್ಲಿ ಎನ್​ ಇಪಿ ಬೇಡ ಎನ್ನುತ್ತಿದ್ದಾರೆ. ಇದರಿಂದ ಅಲೆಮಾರಿಗಳು ಬಡವರ ಮಕ್ಕಳು ಹೋಗುವ ಶಾಲೆಗಳಲ್ಲಿ ಅನ್ಯಾಯವಾಗುತ್ತದೆ ಎಂದು ಶಾಸಕ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 48,000 ಸರ್ಕಾರಿ ಶಾಲೆಗಳಿವೆ. ಇಲ್ಲಿರುವ ಬಡವರ ಮಕ್ಕಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಂಚಿತರನ್ನಾಗಿಸುವುದು ಸಲ್ಲದು ಎಂದರು.

ಬಿಜಪಿ ಸರ್ಕಾರ ಇದ್ದಾಗ ನಾರಾಯಣ ಗುರು ನಿಗಮ ಘೋಷಣೆ ಮಾಡಿದ್ದೆವು. ಕುಲಶಾಸ್ತ್ರ ಅಧ್ಯಯನ ಮಾಡಬೇಕು ಅನ್ನೋ ಬೇಡಿಕೆಯಿತ್ತು. 500 ಕೋಟಿ ಬಿಡುಗಡೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ನಾಳೆ ನಡೆಯುವ ಸಮಾವೇಶದಲ್ಲಿ ಈ ಅನುದಾನ ಘೋಷಿಸಲಿ ಎಂದರು.
ಕುಲಶಾಸ್ತ್ರ ಅಧ್ಯಯನ ವರದಿಯನ್ನು ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು. ಶೇಂದಿ ತೆಗೆಯುವ ವರ್ಗಕ್ಕೆ ಕಲ್ಪಾಶ್ರಯ ಯೋಜನೆಯನ್ನು ಹಿಂದಿನ ಸರ್ಕಾರ ಘೋಷಿಸಿತ್ತು. 5,000 ಮನೆಗಳನ್ನು ಘೋಷಿಸಬೇಕು. ನಮ್ಮ ಸರ್ಕಾರ ಇರುವಾಗ 11 ನಿಗಮಗಳನ್ನು ಸ್ಥಾಪನೆ ಮಾಡಿದ್ದೆವು. ಎಲ್ಲಾ ಹಿಂದುಳಿದ ವರ್ಗದ ನಿಗಮಗಳಿಗೆ ಸಮಾವೇಶದಲ್ಲಿ ಹಣ ಘೋಷಿಸಬೇಕು ಎಂದರು.

ರಾಜ್ಯಾಧ್ಯಕ್ಷರ ವಿರುದ್ಧ ದೆಹಲಿಗೆ ಹೋಗಿ ಚರ್ಚೆ ಮಾಡುತ್ತೇನೆ ಎಂದು ಯತ್ನಾಳ್​ ಹೇಳಿದ್ದಾರೆ. ದೆಹಲಿಗೆ ಹೋಗಿ ಬಂದ ನಂತರ ಎಲ್ಲವೂ ಸರಿಯಾಗುತ್ತದೆ. ಎಲ್ಲಾ ಗೊಂದಲಗಳು ಪರಿಹಾರವಾಗುತ್ತದೆ. ಯತ್ನಾಳ್​ ಬಿಜೆಪಿಯ ಒಳ್ಳೆಯ ಮುಖಂಡರಲ್ಲಿ ಒಬ್ಬರು. ಸ್ವಾಭಾವಿಕವಾಗಿಯೇ ಕೆಲವೊಂದು ಮಾತುಗಳನ್ನು ಆಡುತ್ತಾರೆ. ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಒಟ್ಟಿಗೆ ಕೆಲಸ ಮಾಡುತ್ತೇವೆ. ನಮಗಿಂತ ದೊಡ್ಡವರು ಸೂಕ್ತ ಕಾಲದಲ್ಲಿ ತೀಮಾರ್ನ ಮಾಡುತ್ತಾರೆ. ಶಿಸ್ತು ಕ್ರಮಕ್ಕಿಂತ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಭಾವನೆ ವಿಜಯೇಂದ್ರ ಅವರಲ್ಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net