ನೆನಪು ಹರಿಗೋಲು ಬಿಡುಗಡೆ 19ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಛಾಯಾಗ್ರಾಹಕ ಶಶಿ ಸಾಲಿ ಅವರ ಅಭಿನಂದನ ಗ್ರಂಥ "ನೆನಪು ಹರಿಗೋಲು' ಬಿಡುಗಡೆ ಸಮಾರಂಭವನ್ನು ಮೇ 19ರಂದು ಸಂಜೆ 4 ಗಂಟೆಗೆ ಆಲೂರು ವೆಂಕಟರಾವ್​ ಭವನದಲ್ಲಿ ಆಯೋಜಿಸಲಾಗಿದೆ.

ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಡಾ. ಸಿ. ಸೋಮಶೇಖರ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಶಿ ಸಾಲಿ ಛಾಯಾಗ್ರಹಣದ ಕೌಶಲಗಳು ಕುರಿತು ದೇವು ಪತ್ತಾರ, ಸಾಹಿತಿಗಳ ದೃಷ್ಟಿಯಲ್ಲಿ ಶಶಿ ಸಾಲಿ ಕುರಿತು ಡಾ. ಜಿ.ಎಂ. ಹೆಗಡೆ ಹಾಗೂ ನೆನಪು ಹರಿಗೋಲು- ಶಶಿ ಸಾಲಿ ಆತ್ಮಕಥೆ ಕುರಿತು ಡಾ. ವಿನಯಾ ವಕ್ಕುಂದ ಮಾತನಾಡುವರು. ಪ್ರೊ. ಶಶಿಧರ ತೋಡಕರ, ಶಶಿ ಸಾಲಿ ಉಪಸ್ಥಿತರಿರುವವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net