ಕುಲ್ಕುಂದ ಕೊರತಿಯಮ್ಮ ದೈವದ ನೇಮೋತ್ಸವ

New Project (1)
Published on

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಲ್ಕುಂದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ 56ನೇ ವರ್ಷದ ಒತ್ತೆಕೋಲದ ನಿಮಿತ್ತ ಭಾನುವಾರ ರಾತ್ರಿ 10ನೇ ವರ್ಷದ ಕೊರತಿಯಮ್ಮ ದೈವದ ನೇಮೋತ್ಸವ ನಡೆಯಿತು. ಮಂಗಳವಾರ ಮುಂಜಾನೆ ಮಹಾವಿಷ್ಣುಮೂರ್ತಿ ದೈವದ 56ನೇ ವರ್ಷದ ಒತ್ತೆಕೋಲ ನೆರವೇರಲಿದೆ. ಮುಂಜಾನೆ ದೈವದ ಅಗ್ನಿಪ್ರವೇಶ, ಮಾರಿಕಳ, ಗಂಧಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಗುಳಿಗ ದೈವದ ನಡಾವಳಿ ನೆರವೇರಲಿದೆ.

ದೈವಸ್ಥಾನ ಮುಖ್ಯ ಪೂಜಾರಿ ರಾಮಚಂದ್ರ ಮಣಿಯಾಣಿ, ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ವೆಂಕಟ್ರಾಜ್, ಗೌರವಾಧ್ಯಕ್ಷ ಎಂ.ಚಂದ್ರಹಾಸ ಭಟ್, ಕಾರ‌್ಯಾಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯದರ್ಶಿ ರಾಜೇಶ್‌ಎನ್.ಎಸ್., ಕೋಶಾಧಿಕಾರಿ ರತ್ನಾಕರ ಸುಬ್ರಹ್ಮಣ್ಯ, ಸದಸ್ಯರಾದ ಗೋಪಾಲ ಮಲೆ, ಕೃಷ್ಣ ಮಣಿಯಾಣಿ, ರಾಜೇಶ್ ಕಾಶಿಕಟ್ಟೆ, ಸನತ್‌ಕುಮಾರ್ ಸಿ.ಭಟ್, ಜಯಪ್ರಕಾಶ್ ಜಾಡಿಮನೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net