ಉದ್ಧಿಬಾಣೆ ಮಠದಲ್ಲಿ ದೈವಗಳ ನೇಮೋತ್ಸವ

IMG-20240303-WA0113
Published on

ಸುಂಟಿಕೊಪ್ಪ: ಪನ್ಯ ಗ್ರಾಮದ ಉದ್ಧಿಬಾಣೆ ಮಠದಲ್ಲಿ ಶ್ರದ್ಧಾಭಕ್ತಿಯಿಂದ ಧರ್ಮ ದೈವಗಳ ನೇಮೋತ್ಸವ ಜರುಗಿತು.


ನೇಮೋತ್ಸವ ಅಂಗವಾಗಿ ಶನಿವಾರ ಬೆಳಗ್ಗೆ ಗಣ ಹೋಮ, ಸತ್ಯ ನಾರಾಯಣ ಪೂಜೆ ನಡೆಯಿತು. ಬಳಿಕ ನೇಮ ಮತ್ತು ದೇವತಾ ಕಾರ್ಯಕ್ಕೆ ವಿಘ್ನ ಬಾರದಂತೆ ಪ್ರಾರ್ಥನೆ ಸಲ್ಲಿಸಲಾಯಿತು. ರಾತ್ರಿ 8 ಗಂಟೆಗೆ ಬಂಡಾರ ತೆಗೆಯುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರಕಿತು.ನಂತರ ಕಲ್ಲುರ್ಟಿ ದೈವದ ಕೋಲ ಜರುಗಿತು.


ಭಾನುವಾರ ಮುಂಜಾನೆಯಿಂದ ಪಂಜುರ್ಲಿ ಮತ್ತು ಗುಳಿಗ ದೈವದ ನೇಮ ನಡೆಯಿತು. ನಂತರ ಬೆಳಗ್ಗೆ ಕಾರಣಿಕ ದೈವ ಎನಿಸಿದ ಕೊರಗಜ್ಜ ದೈವದ ನೇಮ ನಡೆಯಿತು. ಭಕ್ತರಿಗೆ ಎರಡು ದಿನಗಳೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.


ಸುಂಟಿಕೊಪ್ಪ, ಕುಶಾಲನಗರ, ಮಡಿಕೇರಿ, ಪನ್ಯ, ಗರಗಂದೂರು, ಮಾದಾಪುರ, ಸುಳ್ಯ, ಪುತ್ತೂರು, ಮಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಿಂದ ಆಗಮಸಿದ್ದ ಭಕ್ತರು ಹರಕೆ ಸಲ್ಲಿಸಿದರು. ಮುಖಂಡರಾದ ಮೋಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಸಂಗೀತ ಮಣಿಮುಖೇಶ್, ವೆಂಕಪ್ಪ ಮೈಸೂರು, ಶಾಂತು ಸುಳ್ಯ, ಜಗದೀಶ್ ಸುಳ್ಯ, ರುಕ್ಮಯ್ಯ,ಬೇಬಿ, ಬಿ.ಟಿ.ರಮೇಶ್, ಶೇಖರ್, ದೇವಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net