ಶ್ರೀ ನವದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ನೇಮೋತ್ಸವ

ಶ್ರೀ ನವದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ನೇಮೋತ್ಸವ
Published on

ಸೋಮವಾರಪೇಟೆ: ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿನ ಪರಿವಾರ ದೈವಗಳ ನೇಮೋತ್ಸವ ಇತ್ತೀಚೆಗೆ ದೇವಾಲಯ ಆವರಣದಲ್ಲಿ ನಡೆಯಿತು.

ಶ್ರೀ ರಕ್ತೇಶ್ವರಿ, ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಮಂತ್ರ ಗುಳಿಗದ ಕೋಲ ನಡೆಯಿತು. ನೂರಾರು ಭಕ್ತರು ಪೂಜಾ ಉತ್ಸವದಲ್ಲಿ ಭಾಗವಹಿಸಿದ್ದರು. ಗಣಹೋಮ, ದೈವಗಳ ಶುದ್ಧೀಕರಣ, ಅನ್ನದಾನ ನಡೆಯಿತು.

ಅನೇಕರು ಹರಕೆ ತೀರಿಸಿದರು. ಕೆಲವರು ಇಷ್ಟಾರ್ಥ ಸಿದ್ಧಿಗಾಗಿ ದೈವಗಳಲ್ಲಿ ಹರಕೆ ಹೊತ್ತರು. ಮಂಗಳೂರು ಮೂಲದ ದೈವಗಳ ನೃತ್ಯವನ್ನು ಸೇರಿದ್ದ ಭಕ್ತರು ಉತ್ಸುಕರಾಗಿ ವೀಕ್ಷಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ಮಾತನಾಡಿ, ದಿ.ವೆಂಕಟರಮಣಚಾರ್ಯ ಅವರ ಶ್ರಮದಿಂದ ಗೌಡಳ್ಳಿಯಲ್ಲಿ ಶ್ರೀನವದುರ್ಗಾ ಪರಮೇಶ್ವರಿ ದೇವಾಲಯ ನಿರ್ಮಿಸಿ, ಸರ್ವಧರ್ಮ ಕ್ಷೇತ್ರವಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ. ಈ ಕ್ಷೇತ್ರದ ಶಕ್ತಿ ಇಲ್ಲಿನ ಭಕ್ತರಿಗೆ ತಿಳಿದಿದೆ. ದಕ್ಷಿಣ ಕನ್ನಡ ಯಕ್ಷಗಾನ ಕಲೆಯ ಪ್ರದರ್ಶನ ಪ್ರತಿವರ್ಷ ಗೌಡಳ್ಳಿಯ ಕ್ಷೇತ್ರದಲ್ಲಿ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪರಿವಾರ ದೈವಗಳ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ನಡೆಯುತ್ತಿದೆ. ಇದರಿಂದ ಕ್ಷೇತ್ರದ ಶಕ್ತಿ ಹೆಚ್ಚಾಗಿದೆ ಎಂದು ಹೇಳಿದರು.

ಪ್ರಧಾನ ಅರ್ಚಕ ವಿಶ್ವರೂಪಚಾರ್ಯ, ಪದಾಧಿಕಾರಿಗಳಾದ ಮಹೇಶ್, ಚಂದ್ರಶೇಖರ್, ಗುರುಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net