

ಮೂಲ್ಕಿ: ಬೆಳ್ಳಾಯರು ಕೋಲ್ನಾಡು ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಕೋರ್ದಬ್ಬು ಹಾಗೂ ತನ್ನಿಮಾನಿಗ ದೈವಗಳ ನೇಮ ವಿಜೃಂಭಣೆಯಿಂದ ನಡೆಯಿತು.
ಶನಿವಾರ ವಿಶೇಷ ಪ್ರಾರ್ಥನೆ, ಧ್ವಜಸ್ತಂಭ ಮುಹೂರ್ತ, ದೊಂಪ ಏರುವುದು, ಭಂಡಾರ ಹೊರಡುವ ಕಾರ್ಯಕ್ರಮ ನಡೆದು ಫ್ರೆಂಡ್ಸ್ ಕ್ಲಬ್ ಕೋಲ್ನಾಡು ವತಿಯಿಂದ ಅನ್ನಸಂತರ್ಪಣೆ ಜರುಗಿತು. ರಾತ್ರಿ ಶ್ರೀ ಕೋರ್ದಬ್ಬು ಹಾಗೂ ತನ್ನಿಮಾನಿಗ ದೈವಗಳ ನೇಮ ಹಾಗೂ ಭಾನುವಾರ ಶ್ರೀ ಧೂಮಾವತಿ ಬಂಟ ದೈವಗಳ ನೇಮ ನಡೆಯಿತು.
ಶ್ರೀ ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷ ಜೈ ಕೃಷ್ಣ ಶೆಟ್ಟಿ ಕಲ್ಲಿಮಾರು, ಕಿರಣ್ ಶೆಟ್ಟಿ ಕೋಲ್ನಾಡುಗುತ್ತು, ಪ್ರಮೋದ್ ಶೆಟ್ಟಿ, ದಿನೇಶ್ ಸುವರ್ಣ ಬೆಳ್ಳಾಯರು, ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.