

ರಬಕವಿ/ಬನಹಟ್ಟಿ: ಸರ್ಕಾರಿ ನೌಕರರ ಸಹಕಾರ ಸಂಘದ ರಬಕವಿ ಘಟಕದ ಅಧ್ಯಕ್ಷರಾಗಿ ರಬಕವಿಯ ಶಿಕ್ಷಕ ಬಿ.ಡಿ. ನೇಮಗೌಡ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಹೊಸೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಎಂ. ಎಚ್. ಲಾಡಖಾನ, ಪ್ರಕಾಶ ಮಠಪತಿ, ಜಿ.ಗಿ. ಕುಲಗೋಡ, ಆರ್.ಬಿ. ಹೋಟಕರ, ಬಿ.ಬಿ. ಮುಧೋಳ, ಭಾರತಿ ಗಂಗಾವತಿ, ರಾಜೇಶ್ವರಿ ಬಾಣಕಾರ, ಈರಪ್ಪ ಕುಂಬಾರ, ಬಸಪ್ಪ ತೇಲಿ, ಮಂಜುನಾಥ ಆಲಗೂರ, ಸತೀಶ ತಳವಾರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.