

ನೆಲ್ಯಾಡಿ: ಕವಿ ರವೀಂದ್ರನಾಥ್ ಠಾಗೋರ್ ಅವರ ಸೇವೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಅವರ ಆದರ್ಶಗಳು ಪ್ರಪಂಚಕ್ಕೆ ಮಾದರಿಯಾಗಿವೆ ಎಂದು ಸಂತ ಜಾರ್ಜ್ ವಿದ್ಯಾಸಂಸ್ಥೆ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗಿಸ್ ಹೇಳಿದರು.
ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಕವಿ ರವೀಂದ್ರನಾಥ ಠಾಗೋರ್ ಪುಣ್ಯತಿಥಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್‌ಡಿಎಂ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ದಿವಾಕರ ಕೊಕ್ಕಡ ಮಾತಾಡಿ, ಠಾಗೋರ್ ಪ್ರಕೃತಿ ಕವಿ ಆಗಿದ್ದರು ಎಂದರು. ಸಂಸ್ಥೆ ಸಂಚಾಲಕ ರೇ. ಫಾ.ನೋಮಿಸ್ ಕುರಿಯಾಕೋಸ್, ಪ್ರಾಚಾರ್ಯ ಎಂ.ಕೆ.ಎಲಿಯಾಸ್, ಮುಖ್ಯಶಿಕ್ಷಕ ಎಂ.ಐ.ತೋಮಸ್, ನಿವೃತ್ತ ಶಿಕ್ಷಕರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿ ಜಸಿಂತಾ ಕೆ.ಜೆ.ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ ಜೆಸಿಂತಾ ಡಿಸೋಜ ವಂದಿಸಿ, ಉಪನ್ಯಾಸಕ ಕಿರಣ್ ರೈ ಮತ್ತು ಶಿಕ್ಷಕಿ ಅನುಷಾ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಠಾಗೂರರ ಕುರಿತಾಗಿ ಸಾಹಿತ್ಯ ಕಾರ್ಯಕ್ರಮ ನೆರವೇರಿತು.