ಕಲಘಟಗಿ: ತಾಲೂಕಿನ ನೆಲ್ಲಿಹರವಿ ಗ್ರಾಮದ ರೈತ ಶಿವಪ್ಪ ಕರ್ಲಟ್ಟಿ (55) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಪ್ಪ 2 ಎಕರೆ 11 ಗುಂಟೆ ಜಮೀನು ಹೊಂದಿದ್ದು, ಬೆಳೆಸಾಲ, ಟ್ರಾೃಕ್ಟರ್ ಸಾಲ ಸೇರಿ ಒಟ್ಟು 32 ಲಕ್ಷ ರೂ. ಸಾಲ ಮಾಡಿದ್ದ. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.