

ಚಿತ್ರದುರ್ಗ: ಮಹಾನ್ ವ್ಯಕ್ತಿಗಳಿಗೆ ವೈಯಕ್ತಿಕ ಮತ್ತು ಸಾಮಾಜಿಕ ಬದುಕುಗಳು ಬೇರೆಯಾಗಿರುವುದಿಲ್ಲ. ಅವರು ಸಾಮಾಜಿಕ ಬದುಕನ್ನೇ ತಮ್ಮ ಬದುಕನ್ನಾಗಿ ಮಾಡಿಕೊಂಡಿರುತ್ತಾರೆ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಂಘಟಕನಾ ಕಾರ‌್ಯದರ್ಶಿ ಜಿ.ಎಸ್.ಕುಮಾರ್ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ,ಪಕ್ಷದ ಸಂಸ್ಥಾಪಕ ಕಾಮ್ರೇಡ್ ಶಿವದಾಸ್ ಘೋಷ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಭೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯಹೋರಾಟದ ಕ್ರಾಂತಿಕಾರಿ ನಾಯಕರಾದ ನೇತಾಜಿ,ಭಗತ್‌ಸಿಂಗ್,ಸೂರ್ಯಸೇನ್,ಚಿತ್ತರಂಜನ್‌ದಾಸ್ ಅವರು ಸಾಮಾಜಿಕ ಬದುಕನ್ನೇ ತಮ್ಮ ಬದುಕನ್ನಾಗಿಸಿಕೊಂಡ ಮಹನೀಯರಾಗಿದ್ದಾರೆ. ಶಿವದಾಸ್ ಘೋಷ್ ಕೂಡ ಇಂತಹ ಮಹಾನ್ ನಾಯಕರಲ್ಲಿ ಒಬ್ಬರಾಗಿ ದ್ದಾರೆ. ಪಕ್ಷಕ್ಕೆ ಬೇಕಾದ ವೈಚಾರಿಕ ನೆಲೆಗಟ್ಟನ್ನು ಅವರು ಒದಗಿಸಿ ಕೊಟ್ಟಿದ್ದಾರೆ.ಪ್ರಸ್ತುತ ಜನವಿರೋಧಿ ಆಡಳಿತದಿಂದ ಬೇಸತ್ತಿರುವ ಜನರು ಪಾರ್ಟಿಯ ಹೋರಾಟವನ್ನು ಬೆಂಬಲಿಸಬೇಕೆಂದರು.
ಶಿವದಾಸ್ ಘೋಷ್ ಭಾಷಣಗಳನ್ನಾಧರಿಸಿದ ಮೂರು ಕನ್ನಡ ಪುಸ್ತಕಗಳಾದ ಭಾರತದಲ್ಲಿ ಸ್ವಾತಂತ್ರ್ಯಚಳವಳಿ ಮತ್ತು ನಮ್ಮ ಕರ್ತವ್ಯಗಳು, ಆಗಸ್ಟ್ 15ರ ಸ್ವಾತಂತ್ರ್ಯ ಮತ್ತು ಜನತೆಯ ವಿಮುಕ್ತಿ, ಚೀನಾದ ಸಾಂಸ್ಕೃತಿಕ ಕ್ರಾಂತಿ -ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಘೋಷ್ ಅವರ ಸೂಕ್ತಿ ಮತ್ತು ಛಾಯಚಿತ್ರ ಪ್ರದರ್ಶನ ಹಾಗೂ ಪುಸ್ತಕ ಮಾರಾಟವಿತ್ತು. ಪಕ್ಷದ ಸ್ಥಳೀಯ ಸಮಿತಿ ಕಾರ‌್ಯದರ್ಶಿ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರವಿಕುಮಾರ್,ಸುಜಾತ,ವಿನಯ್,ಕುಮಾರ್,ಆರ್.ಮೇಘನಾ ಮತ್ತಿತರರು ಇದ್ದರು.
----