ದುಡಿಮೆಯ ಸ್ವಲ್ಪವನ್ನಾದರೂ ಸಮಾಜಕ್ಕೆ ಮೀಸಲಿಡಿ

nelamangala rotary
Published on

ರೋಟರಿ ಜಿಲ್ಲಾ ಪಾಲಕ ವಿ.ಶ್ರೀನಿವಾಸಮೂರ್ತಿ ಕಿವಿಮಾತು

ಪ್ರಸ್ಟೀಜ್ ಜಿಂದಾಲ್ ಸಿಟಿ ಕ್ಲಬ್‌ನ ಪದಗ್ರಹಣ


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ದುಡಿಮೆಯ ಸ್ವಲ್ಪ ಪ್ರಮಾಣ ಭಾಗವನ್ನು ಸಮಾಜದ ಏಳಿಗೆಗೆ ಮೀಸಲಿರಿಸುವ ಗುಣವನ್ನು ಪ್ರತಿಯೊಬ್ಬರೂ ಮೈಗ್ಗೂಡಿಸಿಕೊಂಡರೆ ತಕ್ಕ ಮಟ್ಟಿಗೆ ಬಡತನ ನಿರ್ಮೂಲನೆ ಮಾಡಬಹುದಾಗಿದೆ ಎಂದು ರೋಟರಿ ಜಿಲ್ಲಾ ಪಾಲಕ ವಿ.ಶ್ರೀನಿವಾಸಮೂರ್ತಿ ಹೇಳಿದರು.
ನಗರದ ಕೆಂಪಲಿಂಗಹಳ್ಳಿಯ ವಿವಿಎಸ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ರೋಟರಿ ಪ್ರಸ್ಟೀಜ್ ಜಿಂದಾಲ್ ಸಿಟಿ ಕ್ಲಬ್‌ನ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಪದವಿ ಪದಗ್ರಹಣದಲ್ಲಿ ಮಾತನಾಡಿದರು.
ನಾಲ್ಕೈದು ವರ್ಷಗಳ ಹಿಂದೆ ರೋಟರಿ ಸಂಸ್ಥೆ ಕೇವಲ ಶ್ರೀಮಂತರಿಗೆ ಮಾತ್ರ ಎಂಬ ಭಾವನೆಯಿತ್ತು. ಅದರೆ ಇತ್ತೀಚಿನ ದಿನಗಳಲ್ಲಿ ಸೇವೆಯ ಮಾನೋಭಾವ ಹೊಂದಿರುವ ಎಲ್ಲರೂ ರೋಟರಿಯಲ್ಲಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಪ್ರಸ್ಟೀಜ್ ಜಿಂದಾಲ್ ಸಿಟಿಯಲ್ಲಿ ಸೇವೆಯನ್ನು ಮುಖ್ಯ ಗುರಿಯಾಗಿಟ್ಟು ನೆಲಮಂಗಲ ಕ್ಲಬ್ ಸಹಯೋಗದಲ್ಲಿ ನೂತನ ಕ್ಲಬ್ ಆರಂಭ ಮಾಡಿರುವುದು ಸಂತಸದ ಸಂಗತಿ ಎಂದರು.
ರೋಟರಿ ಪ್ರಸ್ಟೀಜ್ ಜಿಂದಾಲ್ ಸಿಟಿ ಕ್ಲಬ್‌ನ ಅಧ್ಯಕ್ಷ ಸುಬ್ರಮಣ್ಯಹೋಬಳಿದಾರ್ ಮಾತನಾಡಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದರ ಜತೆಗೆ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜದ ಏಳಿಗೆಗಾಗಿ, ಪರಿಸರ ಸಂರಕ್ಷಣೆ, ಸರ್ಕಾರಿ ಶಾಲೆಗಳಸುಧಾರಣೆ, ಉಚಿತ ಆರೋಗ್ಯಶಿಬಿರ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಕಾರ್ಯಕ್ರಮವನ್ನು ಮಾಡಲಾಗುವುದು.
ರೋಟರಿ ಪ್ರಸ್ಟೀಜ್ ಜಿಂದಾಲ್ ಸಿಟಿ ಕ್ಲಬ್‌ನ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಬ್ರಮಣ್ಯಹೋಬಳಿದಾರ್, ಕಾರ್ಯದರ್ಶಿಯಾಗಿ ಅಪೇಕ್ಷಾ ಸುನೀಲ್ ಪದವಿ ಸ್ವೀಕರಿಸಿದರು.
ರೋಟರಿ ಪ್ರಸ್ಟೀಜ್ ಜಿಂದಾಲ್ ಸಿಟಿ ಕ್ಲಬ್ ಉಪಾಧ್ಯಕ್ಷ ಎ.ವಿ.ವೇಣುಗೋಪಾಲ್, ಜಂಟಿ ಕಾರ್ಯದರ್ಶಿ ಬಿ.ಪ್ರವೀಣಾ, ಖಜಾಂಚಿ ಸುಪ್ರೀತಾ, ನಿರ್ದೇಶಕರಾದ ಗಾಯತ್ರಿ ಬಸವರಾಜು, ದೇವರಾಜು, ಬಿ.ಕೆ.ನಾಗರಾಜು, ಪುಷ್ಪಾನಾಗರಾಜು, ಎಂ.ಸಂತೋಷ್, ನಾಗರಾಜ್‌ಪಟೇಲ್, ಬಸವರಾಜು ಪಟೇಲ್, ವೆಂಕಟೇಶ್, ಕೆ.ವಿಶ್ವನಾಥ್ ಮತ್ತಿತತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net