ಆದಾಯ ಹೆಚ್ಚಿದರೆ ಅಭಿವೃದ್ಧಿ: ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್ ಅಭಿಮತ

1
ನೆಲಮಂಗಲ ನಗರಸಭೆ ವ್ಯಾಪ್ತಿಯ ಬಸವನಹಳ್ಳಿ ನಗರಸಭೆ ಕಾರ್ಯಾಲಯಾದಲ್ಲಿ ಬುಧವಾರ ಕರೆದಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಗಣೇಶ್ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಲತಾಹೇಮಂತ್‌ಕುಮಾರ್, ಉಪಾಧ್ಯಕ್ಷ ಸುಜಾತಮುನಿಯಪ್ಪ, ಪೌರಾಯುಕ್ತ ರಾಜಶೇಖರ್ ಮತ್ತಿತರರು ಇದ್ದರು.
Published on

ನೆಲಮಂಗಲ: ನಗರಸಭೆಗೆ ಅದಾಯ ಹೆಚ್ಚಾದಾಗ ಮಾತ್ರ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್ ತಿಳಿಸಿದರು.


ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯ ನಗರಸಭೆ ಕಾರ್ಯಾಲಯಾದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ನಗರಸಭೆ ಆದಾಯ ಈ ಹಿಂದಿಗಿಂತ ಹೆಚ್ಚಾಗಿದೆ. ಆಸ್ತಿ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಕುರಿತು ಸದಸ್ಯರಿಗೆ ಅಧಿಕಾರಿಗಳು ಮನವರಿಕೆ ಮಾಡಬೇಕು. ಹಾಗೆಯೇ ಸದಸ್ಯರು, ಸಾರ್ವಜನಿಕರಿಗೆ ಸಂಬಂಧಿಸಿದಂತೆ ನೀಡಿರುವ ಅವಾಲುಗಳ ಪಟ್ಟಿಗಳಿಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದರು.
ಈ ಹಿಂದಿನ ಸಭೆಯಲ್ಲಿ ಗಮನಕ್ಕೆ ತಂದ ಸಾಕಷ್ಟು ಸಮಸ್ಯೆಗಳು ಬಗ್ಗೆ ಹರಿದಿವೆ. ಆದ್ಯತೆ ಮೇರೆಗೆ ಮತ್ತಷ್ಟು ಅಭಿವೃದ್ಧಿ ಮಾಡಲು ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದರು.


ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಜಾಗವನ್ನು ಅಕ್ರಮವಾಗಿ ಮಾಡಿರುವ ಖಾತೆ ರದ್ದು ಪಡಿಸಬೇಕು ಎಂದು ನರಸಿಂಹಮೂರ್ತಿ ಮನವಿ ಮಾಡಿದರು.
ನಗರಸಭೆ ಅಧಿಕಾರಿಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗದಿರುವ ಜಾಗಕ್ಕೆ, ಪಾರ್ಕ್ ಹಾಗೂ ಸರ್ಕಾರಿ ಜಾಗಕ್ಕೆ ಅಕ್ರಮವಾಗಿ ಖಾತೆ ಮಾಡುತ್ತಿದ್ದಾರೆ ಎಂದು ಆನಂದ್ ಆರೋಪಿಸಿದರು.


ನಗರಸಭೆಯಲ್ಲಿ ಅಧಿಕಾರಿಗಳು ದಿನಚರಿ ಪಾಲಿಸಬೇಕು. ಸ್ಥಳಪರಿಶೀಲನೆ ಹೆಸರಿನಲ್ಲಿ ಅಧಿಕಾರಿಗಳು ಖಾಸಗಿ ಕೆಲಸಕ್ಕೆ ಕಚೇರಿ ಸಮಯ ಬಳಕೆ ಮಾಡುಕೊಳ್ಳುತ್ತಿದ್ದಾರೆ ಎಂದು ಸದಸ್ಯ ಪುರುಷೋತ್ತಮ್ ದೂರಿದರು.

ಸಮಸ್ಯೆಗಳ ಚರ್ಚೆ: ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ನಗರದ ಜನತೆ ಎದುರಿಸುತ್ತಿರುವ ಸಮಸ್ಯೆಗಳು, ನಗರದಲ್ಲಿ ಸ್ವಚ್ಛತೆ ಸಮಸ್ಯೆ, ರಾಜಗಾಲುವೆ ಸ್ವಚ್ಛತೆ ಮತ್ತು ಒತ್ತುವರಿ ತೆರವು, ನಗರದ ಕೆರೆ ಏರಿ ಗಿಡಗಂಟೆಗಳ ತೆರವು, ಶುದ್ಧಕುಡಿಯುವ ನೀರಿನ ಪೂರೈಕೆ ಸೇರಿದಂತೆ ನಗರದ ಮುಖ್ಯರಸ್ತೆಯಲ್ಲಿ ಬೀದಿ ದೀಪಗಳ ಅಳವಡಿಕೆ ಮಾಡಬೇಕಂದು ಕೆಲ ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ: ನಗರಸಭೆ ನೂತನ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದ 9 ಮಂದಿ ಸದಸ್ಯರು, ಸದಸ್ಯ ಎನ್.ಗಣೇಶ್ ಅವರನ್ನು ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದರು. ಸದಸ್ಯ ಕೆ.ಎಂ ಎಂ.ಶಿವಕುಮಾರ್ ಅವರನ್ನು ನೆ.ಯೋ.ಪ್ರಾಧಿಕಾರದ ಸದಸ್ಯರಾಗಿ ಆಯ್ಕೆ ಮಾಡಿ ಕಳಿಸಲು ತೀರ್ಮಾನಿಸಲಾಯಿತು.

ಸದಸ್ಯರಾದ ಗಂಗಾಧರ್‌ರಾವ್, ಕೆ.ಎಂ.ಶಿವಕುಮಾರ್, ನರಸಿಂಹಮೂರ್ತಿ, ಪದ್ಮನಾಭ್, ಪ್ರಸಾದ್, ಆಂಜಿನಪ್ಪ, ಆಂಜನಮೂರ್ತಿ, ಪುರೊಷೋತ್ತಮ್, ಸಿ.ಪ್ರದೀಪ್, ಸುನೀಲ್‌ಮೂಡ್, ಜಿ.ಆನಂದ್, ಲೋಲಾಕ್ಷಿಗಂಗಾಧರ್, ಎಸ್.ಎನ್.ಪೂರ್ಣಿಮಾ ಸುಗ್ಗರಾಜು, ಸುಧಾಕೃಷ್ಣಪ್ಪ, ಭಾರತಿಬಾಯಿ, ಪುಷ್ಪಲತಾ, ರಾಜಮ್ಮಪಿಳ್ಳಪ್ಪ, ಶಾರದಾ ಉಮೇಶ್, ಸೌಭಾಗ್ಯಾ, ದಾಕ್ಷಾಯಿಣಿ, ಹೆಚ್ಚುವರಿ ಸದಸ್ಯರಾದ ರಾಮಮೂರ್ತಿ, ಮುನಿರಾಜು, ಆಂಜಿನಮೂರ್ತಿ, ಕೃಪಾನಂದ, ನಾಮನಿರ್ದೇಶಿತ ಸದಸ್ಯ ಕೆ.ವಸಂತ್, ಎಂ.ರವಿ, ಚಂದ್ರಶೆಟ್ಟಿ, , ರಾಜಮ್ಮಪ್ರಕಾಶ್, ಎ.ಎಸ್.ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net