

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸಮಾಜದಲ್ಲಿರುವ ಬಡ ಜನರಲ್ಲಿ ನಗು ತರಿಸಿ, ಅವರ ಜೀವನ ಬದಲಾಯಿಸಬಲ್ಲ ಶಕ್ತಿ ರೋಟರಿ ಸದಸ್ಯರಲ್ಲಿದೆ ಎಂದು ಜಿಲ್ಲಾ ಪ್ರಾಂತಪಾಲ ವಿ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
ನಗರದ ಕೆಂಪಲಿಂಗಹಳ್ಳಿಯ ವಿವಿಎಸ್ ಗಾರ್ಡನ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ನೆಲಮಂಗಲ ರೋಟರಿ ಉತ್ತಮ ಕ್ಲಬ್ ಆಗಿ ಗುರುತಿಸಿಕೊಂಡಿದೆ. ಈ ವರ್ಷ ಟೀಮ್ ಭರವಸೆ ಎಂಬ ಶೀರ್ಷಿಕೆಯಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಯಶಸ್ವಿಗೊಳಿಸಬೇಕು ಎಂದರು.
ನಿಕಟಪೂರ್ವ ಅಧ್ಯಕ್ಷ ಎನ್.ಜಿ.ನಾಗರಾಜು ಮಾತನಾಡಿ, ಗ್ರಾಮೀಣರ ಆರೋಗ್ಯ, ಬಡಮಕ್ಕಳ ಶಿಕ್ಷಣದ ಪ್ರಗತಿ ಸೇರಿ ಪರಿಸರ ರಕ್ಷಣೆ ಮಾಡಿದ್ದಕ್ಕಾಗಿ ಈ ಬಾರಿ ರೋಟರಿಗೆ ಬೆಸ್ಟ್ ಕ್ಲಬ್ ಮತ್ತು ಬೆಸ್ಟ್ ಅಧ್ಯಕ್ಷ ಅವಾರ್ಡ್ ಸೇರಿ 20 ಪ್ರಶಸ್ತಿಗಳು ದೊರೆತಿವೆ ಎಂದರು.
ನಿಕಟಪೂರ್ವ ಕಾರ್ಯದರ್ಶಿ ಕೆ.ಎಸ್.ಲೋಕೇಶ್ 2022-23ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಯೋಗಪಟು ವಾದಿರಾಜ್ ಅವರಿಗೆ 2023-24ನೇ ರೋಟರಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಿಕಾ ಸಾಮಗ್ರಿ ವಿತರಣೆ: ಚಕ್ಕಸಂದ್ರ ಹಾಗೂ ಪಾಪಬೋವಿಪಾಳ್ಯದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿ ಮತ್ತು ಹುರುಳಿಹಳ್ಳಿ ಕೃಷಿಕ ಮಂಜುನಾಥ್ ಅವರಿಗೆ ಔಷಧ ಸಿಂಪಡಣೆ ಯಂತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಪವಾಡ ಬಸವಣ್ಣ ದೇವರ ಮಠದಲ್ಲಿ 30ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.
ರೋಟರಿ ವಲಯ ಪ್ರಾಂತಪಾಲ ಉಮೇಶ್, ಜಿಲ್ಲಾ ಸಹಾಯಕ ಪ್ರಾಂತಪಾಲ ಡಿ.ರಾಜಶೇಖರ್, ಜಿಲ್ಲಾ ಕಾರ್ಯದರ್ಶಿ ಗಣೇಶ್‌ಬಾಲಕೃಷ್ಣನ್, ನಿಕಟಪೂರ್ವ ಅಧ್ಯಕ್ಷ ಎನ್.ಜಿ.ನಾಗರಾಜು, ಕಾರ್ಯದರ್ಶಿ ಲೋಕೇಶ್, ರೋಟರಿ ಸಂಸ್ಥಾಪಕ ಅಧ್ಯಕ್ಷ ಎಚ್.ಜಿ.ರಾಜು, ಮಾಜಿ ಅಧ್ಯಕ್ಷ ಟಿ.ನಾಗರಾಜು, ಸಿ.ಜಿ.ಮಂಜುನಾಥ್‌ಗೌಡ, ಎಂ.ಎನ್.ಹರೀಶ್‌ಕುಮಾರ್, ವಕೀಲ ಮಂಜುನಾಥ್, ವನರಾಜ, ವಿ.ಆರ್.ಸ್ವಾಮಿ, 2024-25ನೇ ಸಾಲಿನ ನಿಯೋಜಿತ ಅಧ್ಯಕ್ಷ ಬಿ.ಆರ್.ಸುರೇಂದ್ರನಾಥ್, ರೋಟರಿ ಇನ್ನರ್ ವೀಲ್ ಅಧ್ಯಕ್ಷೆ ತನುಜಾ, ಮಾಜಿ ಅಧ್ಯಕ್ಷೆ ಮಂಜುಳಾ ಸಿದ್ಧರಾಜು, ಶಾರದಾ ಸುಂದರೇಶ್ ಇದ್ದರು.