ಸೇವಾಮನೋಭಾ, ನಾಯಕತ್ವ ಗುಣ ಬೆಳೆಸುವ ಉದ್ದೇಶ

nelamangala rotary
Published on

ರೋಟ್ರಾಕ್ಟ್ ಕ್ಲಬ್ ಉದ್ಘಾಟನೆಯಲ್ಲಿ ರೋಟರಿ ಅಧ್ಯಕ್ಷ ಎಂ.ಟಿ.ನವೀನ್‌ಕುಮಾರ್ ಹೇಳಿಕೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪದವಿ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಕಾಲೇಜುಗಳಲ್ಲಿ ರೋಟ್ರಾಕ್ಟ್ ಕ್ಲಬ್ ಸ್ಥಾಪಿಸಲಾಗುತ್ತಿದೆ ಎಂದು ರೋಟರಿ ಅಧ್ಯಕ್ಷ ಎಂ.ಟಿ.ನವೀನ್‌ಕುಮಾರ್ ಹೇಳಿದರು.
ನಗರದ ಪವಾಡ ಶ್ರೀಬಸವಣ್ಣ ದೇವರ ಮಠದ ಆವರಣದಲ್ಲಿರುವ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಲಮಂಗಲ ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ರೋಟ್ರಾಕ್ಟ್ ಕ್ಲಬ್ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದು, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ವಿಶ್ವದಾದ್ಯಂತ ಪೊಲೀಯೋ ನಿರ್ಮೂಲನೆ, ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸೆ, ಸರ್ಕಾರಿ ಶಾಲೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು.
ರೋಟರಿ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಹರೀಶ್‌ಕುಮಾರ್ ಮಾತನಾಡಿ, ರೋಟರಿಯಲ್ಲಿ ಪ್ರತಿಯೊಬ್ಬರು ದುಡಿಮೆಯ ಸ್ವಲ್ಪ ಪ್ರಮಾಣ ಹಣವನ್ನು ಮೀಸಲಿಟ್ಟು ಸಮಾಜದ ಏಳಿಗೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದು, ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದರು.
ನೂತನ ಪದಾಧಿಕಾರಿಗಳನ್ನು ರೋಟರಿ ಅಧ್ಯಕ್ಷ ಎಂ.ಟಿ.ನವೀನ್‌ಕುಮಾರ್ ಸನ್ಮಾನಿಸಿದರು.

ಪದಾಧಿಕಾರಿಗಳ ಆಯ್ಕೆ ರೋಟರಿ ಸಂಸ್ಥೆಯ ರೋಟ್ರಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ ಆರ್.ಪ್ರೀಯಾ, ಕಾರ್ಯದರ್ಶಿಯಾಗಿ ಆರ್.ಸುಜಾತ, ಖಜಾಂಚಿ ಬಿ.ಜಿಶಕುಂತಲಾ, ಸಂಯೋಜಕಿ ಎಚ್.ಜೆ.ತಾರಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರೋಟರಿ ಯುವ ಸೇವಾ ನಿರ್ದೇಶಕ ಹನುಮಂತರಾಜು ತಿಳಿಸಿದರು.

ರೋಟರಿ ಮಾಜಿ ಅಧ್ಯಕ್ಷ ಮಂಜುನಾಥ್, ವಿ.ಆರ್.ಸ್ವಾಮಿ, ಹಲಸೂರು ರೋಟರಿ ಅಧ್ಯಕ್ಷ ಮೋಹನ್‌ಕುಮಾರ್, ಆರ್‌ಟಿ ನಗರ ರೋಟರಿ ಅಧ್ಯಕ್ಷ ಸುಧಾಕರ್‌ರಾಜನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net