ಹಾಲು ಪೂರೈಕೆಯಲ್ಲಿ ನೆಲಮಂಗಲ ಮುಂದು

12 Nela-ph-01 Abhinandane
ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಬಾವಿಕೆರೆ ಗ್ರಾಮದ ಮಹಿಳಾ ಹಾಲು ಉತ್ಪಾದಕ ಸಹಕಾರಿ ಸಂಘದ ಕಚೇರಿಗೆ ಭೇಟಿ ನೀಡಿದ್ದ ಬಮುಲ್ ನಿರ್ದೇಶಕ ಭವಾನಿಶಂಕರ್‌ಬೈರೇಗೌಡ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಬಮುಲ್ ಉಪ ವ್ಯವಸ್ಥಾಪಕ ಡಾ.ಗೋಪಾಲಗೌಡ, ಕಲ್ಯಾಣ ಟ್ರಸ್ಟ್ ಮೇಲ್ವಿಚಾರಕ ರಮೇಶ್, ಗ್ರಾಪಂ ಸದಸ್ಯ ಮಹಂತೇಶ್ ಇತರರು ಇದ್ದರು.
Published on

ಬಮುಲ್ ನಿರ್ದೇಶಕ ಭವಾನಿಶಂಕರ್‌ಬೈರೇಗೌಡ ಹೇಳಿಕೆ- ಬಾವಿಕೆರೆ ಡೇರಿಗೆ ಭೇಟಿ

ನೆಲಮಂಗಲ: ಬಮುಲ್‌ಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವಲ್ಲಿ ತಾಲೂಕು ಮೊದಲ ಸ್ಥಾನದಲ್ಲಿದೆ ಎಂದು ಬಮುಲ್ ನಿರ್ದೇಶಕ ಭವಾನಿಶಂಕರ್‌ಬೈರೇಗೌಡ ತಿಳಿಸಿದರು.

ತಾಲೂಕಿನ ಯಂಟಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಾವಿಕೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಚೇರಿಗೆ ಗುರುವಾರ ಭೇಟಿ ನೀಡಿ ಮಾತನಾಡಿದರು. ತಾಲೂಕಿನಾದ್ಯಂತ ಬಹುತೇಕ ರೈತರು ಹೈನುಗಾರಿಕೆ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ತಾಲೂಕಿನಲ್ಲಿ 180ಕ್ಕೂ ಹೆಚ್ಚು ಡೇರಿಗಳಿದ್ದು, ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ರಾಜಕೀಯ ಕುತಂತ್ರ : ಬಮುಲ್ ಚುನಾವಣೆಯಲ್ಲಿ ತಾಲೂಕಿನ ಬಾವಿಕೆರೆ ಡೇರಿ ಅಧ್ಯಕ್ಷರು ನನ್ನ ಪರ ಇದ್ದಾರೆಂದು ತಿಳಿದ ಅಂದಿನ ನಿರ್ದೇಶಕ, ಸಂಘವನ್ನು ಸೂಪರ್ ಸೀಡ್ ಮಾಡಿಸುವ ಮೂಲಕ ಸಂಘದ ಅಧ್ಯಕ್ಷರ ಮತದಾನದ ಹಕ್ಕನ್ನು ಇಲ್ಲದಂತೆ ಮಾಡಿದ್ದರು. ಎಷ್ಟೇ ಕುತಂತ್ರ ಮಾಡಿದರೂ ದೈವ ಬಲದಿಂದ ನಿರ್ದೇಶಕನಾಗಿದ್ದೇನೆ. ರೈತರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ

ಎಂದು ಭವಾನಿಶಂಕರ್‌ಬೈರೇಗೌಡ ತಿಳಿಸಿದರು.

ಹಾಲು ಉತ್ಪಾದಕರ ಮನವಿಕಳೆದ 2 ವರ್ಷಗಳ ಹಿಂದೆ ಡೇರಿ ಕಟ್ಟಡ ನಿರ್ಮಾಣ ಮಾಡಿದ್ದು, ಉದ್ಘಾಟನೆ ಮಾಡಬೇಕು. ಆದರೆ, ಸಂಘ ಸೂಪರ್ ಸೀಡ್ ಆಗಿ ಅಧಿಕಾರ ಕಳೆದುಕೊಂಡಿದ್ದು, ಅದಷ್ಟು ಬೇಗ ಚುನಾವಣೆ ಮಾಡಿಸಬೇಕು. ಜತೆಗೆ ಬಮುಲ್‌ನಿಂದ ದೊರೆಯುವ ಸೌಲಭ್ಯ ಒದಗಿಸಿಕೊಡಬೇಕು ಎಂದು ಗ್ರಾಮದ ಹಾಲು ಉತ್ಪಾದಕರು ಮನವಿ ಮಾಡಿದರು.

ಬಮುಲ್ ಉಪವ್ಯವಸ್ಥಾಪಕ ಡಾ.ಗೋಪಾಲಗೌಡ, ಕಲ್ಯಾಣ ಟ್ರಸ್ಟ್ ಮೇಲ್ವಿಚಾರಕ ರಮೇಶ್, ಗ್ರಾಪಂ ಸದಸ್ಯ ಮಹಂತೇಶ್, ಡೇರಿ ಕಾರ್ಯದರ್ಶಿ ನಾಗರತ್ನಾ, ಕಸಬಾ ವಿಎಸ್ಸೆಸ್ಸೆನ್ ಮುಖ್ಯಕಾರ್ಯನಿರ್ವಾಹಕ ಮಹೇಶ್‌ಕುಮಾರ್, ಮುಖಂಡ ಅಂಜನಮೂರ್ತಿ, ಗಂಗಾಧರ್, ವೀರೇಶ್, ನಾಗರಾಜಯ್ಯ, ಸಿದ್ದರಾಜು, ಲಕ್ಷ್ಮಯ್ಯ, ರೇಣುಕಾ, ಮಾದೇಶ್, ಅಭಿಷೇಕ್, ದಾಸೇಗೌಡ, ವಿಜಯ್‌ಕುಮಾರ್, ವಸಂತ್‌ಕುಮಾರ್ ಇದ್ದರು.

ಕಟ್ಟಡ ಉದ್ಘಾಟನೆ ಕಾರ್ಯ ಶೀಘ್ರದಲ್ಲೇ ನೆರವೇರಲಿದೆ. ಜತೆಗೆ ಚುನಾವಣೆ ನಡೆಸದೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಂಘಕ್ಕೆ ನಿರ್ದೇಶಕರು ಹಾಗೂ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುವುದು. - ಭವಾನಿಶಂಕರ್‌ಬೈರೇಗೌಡ, ಬಮುಲ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net