ಹಸು ಕದಿಯಲು ಯತ್ನಿಸಿದವನ ಬಂಧನ

arrest
Published on

ನೆಲಮಂಗಲ: ಹಸು ಕಳವು ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಗ್ರಾಮದ ನಿವಾಸಿ ದೇವರಾಜು (25) ಬಂಧಿತ. ನಗರದ ಸುಭಾಷ್‌ನಗರದ ನಿವಾಸಿ ನೀಲಾಂಬಿಕಾ ಅವರ 2 ಹಸುಗಳನ್ನು ಆ.29ರಂದು ಸಂಜೆ 5 ಸುಮಾರಿಗೆ ಕಳವು ಮಾಡಲು ಮುಂದಾಗಿದ್ದ. ಈ ವೇಳೆ ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net