ಕೈಮಗ್ಗ ದಿನಾಚರಣೆ ಅಂಗವಾಗಿ ನೇಕಾರರಿಗೆ ಸನ್ಮಾನ

08GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ನಗರದ 5ನೇ ವಾರ್ಡ ನೇಕಾರ ಕಾಲೋನಿಯಲ್ಲಿ ಬಿಜೆಪಿ ಮಂಡಳ ಮಹಿಳಾ ಮೋರ್ಚಾ ವತಿಯಿಂದ ಹಿರಿಯ ನೇಕಾರರಿಗೆ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಬಿಜೆಪಿ ಮಹಿಳಾ ಮಂಡಳ ಮಾನ್ವಿ, ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಬೆಟಗೇರಿಯಲ್ಲಿ ಸ್ಥಾಪನೆಯಾಗಲೂ ಇಲ್ಲಿನ ಸ್ಥಳಿಯ ನೇಕಾರರು ಮೂಲ ಕಾರನರಾಗಿದ್ದಾರೆ. ಅಂದಿನ ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಉತ್ತಮ ಜವಳಿ ನೀತಿ ಜಾರಿಗೆ ತಂದು ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಪ್ರಾರಂಭಿಸಲು ನಿರ್ಧರಿಸಿತು. ಅದರ ಪ್ರತಿ ಲವಾಗಿ ಬಿ.ಎಸ್​. ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂಧರ್ಬದಲ್ಲಿ ರಾಜ್ಯದಲ್ಲಿಯೇ ಏಕೈಕ ಕೈಮಗ್ಗ ಸಂಸ್ಥೆ ಜಿಲ್ಲೆಯಲ್ಲಿ ಸ್ಥಾಪನೆಯಾಯಿತು ಎಂದು ಹೇಳಿದರು.
ನಿರ್ಮಲಾ ಕೊಳ್ಳಿ, ಲಕ್ಷಿ$್ಮ ಕಾಕಿ, ಸುಜಾತಾ ಕಾಡಪ್ಪನವರ, ಶಂಕರ ಕಾಕಿ, ಪದ್ಮಕ್ಕ ಕರರ್ಜಗಿ, ಗೀತಾ ಕರೆಕಲ್ಲ, ಸವಿತಾ ಅಸುಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net