ಸಹಕಾರದ ಕೃಷಿ ಕಾರ್ಯದಿಂದ ಪರಿಸರ ಸಮೃದ್ಧಿ : ಗಂಗಾಧರ ಶೆಟ್ಟಿ ಬೆರ್ಕೆತೋಟ ಚಿಂತನೆ

New Project (12)
Published on

ಮೂಲ್ಕಿ: ಪರಸ್ಪರ ಸಹಕಾರದಿಂದ ನಡೆಸುವ ಕೃಷಿ ಕಾರ್ಯದಲ್ಲಿ ಭೂಮಿ ಹಸನಾಗಿ ಸಸ್ಯ ಶ್ಯಾಮಲೆಯಾಗುವ ಜತೆಗೆ ಪರಿಸರ, ಹೈನುಗಾರಿಕೆ ಸಮೃದ್ಧಿಯಾಗುತ್ತದೆ ಎಂದು ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಬೆರ್ಕೆತೋಟ ಹೇಳಿದರು.

ಪಂಜಿನಡ್ಕ ಗ್ರಾಮದ ಯಕ್ಷ ಮಿತ್ರರು ತಂಡದ ವತಿಯಿಂದ ಮೂರನೇ ವರ್ಷದ ಬೆನ್ನಿಡ್ ಬೆನ್ ಕುಲ್ದು ತಿನ್ ಶೀರ್ಷಿಕೆಯಡಿ ಗ್ರಾಮದಲ್ಲಿ ಕೃಷಿ ಮಾಡದೆ ಹಡಿಲು ಬಿದ್ದ ಗದ್ದೆಗಳ ನಾಟಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಕಕ್ವ ಕೊಲಕಾಡಿ ಕಲತಬರಿ ಗಂಗಾಧರ ದೇವಾಡಿಗ ಅವರ ಗದ್ದೆಯಿಂದ ನೇಜಿ ತೆಗೆದು ಗಂಗಾಧರ ಶೆಟ್ಟಿ ಬೆರ್ಕೆತೋಟ ಅವರ ಗದ್ದೆಯಲ್ಲಿ ನಾಟಿ ಮಾಡಲಾಯಿತು.

ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ಶೆಟ್ಟಿಗಾರ್, ಕೋಶಾಧಿಕಾರಿ ಹರ್ಷರಾಜ್ ಆಚಾರ್ಯ, ಕಾರ್ಯದರ್ಶಿ ಜೀವನ್ ಶೆಟ್ಟಿಗಾರ್, ಸಂಘದ ಹಿತೈಷಿ ಜೀವನ್ ಕೋಟ್ಯಾನ್ ಗೋಳಿಜೋರ, ಸಂಘದ ಸಂಚಾಲಕ ಸುರೇಶ್ ಕೊಲಕಾಡಿ, ಸದಸ್ಯರು ಹಾಗೂ ಬೆರ್ಕೆಮನೆ ಕಿಶೋರ್ ಶೆಟ್ಟಿ, ನಳಿನಿ ಎಂ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net