ನೇಜಾರು ಹತ್ಯೆ ಆರೋಪಿ ಪ್ರವಿಣ್​ಗೆ ಐನಾಜ್​ 8 ತಿಂಗಳ ಪರಿಚಯ

udp-sp arun
Published on

ಉಡುಪಿ: ನೇಜಾರು ತೃಪ್ತಿ ನಗರದಲ್ಲಿ ನ. 12 ರಂದು ನಡೆದಿದ್ದ ತಾಯಿ ಮತ್ತು ಮಕ್ಕಳ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಪ್ರವಿಣ್​ ಚೌಗಲೆ ಸ್ಥಳ ಮಹಜರು ಸಹಿತ ಒಂದು ಹಂತದ ತನಿಖಾ ಪ್ರಕ್ರಿಯೆ ಪೂರ್ಣಗೊಂಡಿದೆ. ಆರೋಪಿ ಮೃತ ಯುವತಿ ಐನಾಜ್​ಗೆ 8 ತಿಂಗಳಿನಿಂದ ಪರಿಚಿತನಾಗಿದ್ದು, 1 ತಿಂಗಳಿನಿಂದ ಆಕೆ ಮಾತುಕತೆ ನಿಲ್ಲಿಸಿದ ಕಾರಣಕ್ಕೆ ದ್ವೇಷ ಭಾವನೆಯಿಂದ ಹತ್ಯೆ ನಡೆಸಿರುವುದು ಕಂಡುಬಂದಿದೆ ಎಂದು ಉಡುಪಿ ಎಸ್​ಪಿ ಡಾ. ಅರುಣ್​ ಕೆ. ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಪ್ರವಿಣ್​ ಸಂತ್ರಸ್ತೆ ಐನಾಜ್​ಗೆ ಹಣಕಾಸು ಸಹಾಯ ಮಾಡಿದ್ದು, ತನ್ನ ಸ್ಕೂಟರನ್ನು ಆಕೆಗೆ ಉಪಯೋಗಿಸಲು ನೀಡಿದ್ದ. ಕೆಲಸದ ನಿಮಿತ್ತ 8 ರಿಂದ 10 ಬಾರಿ ಇಬ್ಬರೂ ಜೊತೆಗೆ ವಿಮಾಣದಲ್ಲಿ ಪ್ರಯಾಣಿಸಿದ್ದರು. ಇಬ್ಬರ ಮಧ್ಯೆಯೂ ಗೆಳೆತನವಿತ್ತು. ಆಕೆಯ ಬಗ್ಗೆ ವಿಪರೀತ ಪೊಸೆಸಿವ್​ ನೆಸ್​ ಬೆಳೆಸಿಕೊಂಡಿದ್ದ ಆತ ಮಾತು ನಿಲ್ಲಿಸದ ಕೋಪದಲ್ಲಿ ಕೊಲೆ ಮಾಡಲು ನಿರ್ಧರಿಸಿದ್ದ ಎಂದು ಮಾಹಿತಿ ನೀಡಿದರು.

ಆರಂಭದಲ್ಲಿ ಐನಾಜ್​ ಮೇಲೆ ಮೊದಲು ದಾಳಿ ಮಾಡುತ್ತಾನೆ. ಇದನ್ನು ತಡೆಯಲು ಬಂದ ತಾಯಿ ಹಾಗೂ ಅಫ್ನಾನ್​, ಆಸಿಂ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಒಂದೇ ಚಾಕುವಿನಲ್ಲಿ ನಾಲ್ವರ ಕೊಲೆಗೈದು ಬೇರೆ ಬೇರೆ ವಾಹನದಲ್ಲಿ ಮಂಗಳೂರಿಗೆ ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕುವನ್ನು ಮನೆಯಲ್ಲೇ ಇಟ್ಟು ಹೆಂಡತಿಯ ಕುಟುಂಬಸ್ಥರ ಮನೆಗೆ ಹೋಗಿದ್ದಾನೆ. ಕೈಗೆ ಗಾಯವಾಗಿರುವ ಬಗ್ಗೆ ಪತ್ನಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ ಎಂದರು.

ಕ್ರಿಮಿನಲ್​ ದಾಖಲೆ ಇಲ್ಲ

ಪ್ರವಿಣ್​ಗೆ ಈ ಹಿಂದೆ ಯಾವುದೇ ಕ್ರಿಮಿನಲ್​ ದಾಖಲೆ ಇಲ್ಲ. 2007ರಲ್ಲಿ ಸ್ವಲ್ಪ ದಿನ ಪೂಣೆಯಲ್ಲಿ ಪೊಲೀಸ್​ ಆಗಿ ಕಾರ್ಯನಿರ್ವಹಿಸಿ, ನಂತರ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಸೇರಿದ್ದಾನೆ. ಆರೋಪಿಗೆ ಪ್ರತ್ಯೇಕ ಸೆಲ್​ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರನ್ನು ಬಂದೋಬಸ್ತ್​ ನಿಯೋಜಿಸಲಾಗಿದೆ. ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಸಂಗ್ರಹಿಸುತ್ತಿದ್ದೇವೆ. ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಚಾರ್ಜ್​ ಶೀಟ್​ ಸಲ್ಲಿಕೆಗೆ ಇನ್ನೂ 70 ದಿನ- ಕಾಲಾವಕಾಶವಿದೆ ಎಂದರು.

ಕುಟುಂಬದ ಸಹಕಾರ
ಪ್ರಕರಣದ ತನಿಖೆಗೆ ನೇಜಾರು ಸಂತ್ರಸ್ತ ಕುಟುಂಬ ಸಹಕಾರ ಕೊಟ್ಟಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳಿಯರು ಸಹಕರಿಸಿದ್ದಾರೆ. ವಿಶೇಷ ಪಬ್ಲಿಕ್​ ಪ್ರಾಸಿಕ್ಯೂಟರ್​ ನೇಮಕಕ್ಕೆ ಇಲಾಖೆಯಿಂದ ಸಹಕಾರ ನೀಡಲಾಗುವುದು. ಸಂತ್ರಸ್ತರು ಹಾಗೂ ಆರೋಪಿಗಳ ಎಲ್ಲಾ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದ್ದು, ಎ್​ ಎಸ್​ ಎಲ್​ ವರದಿಗಾಗಿ ಕಳುಹಿಸಲಾಗಿದೆ ಎಂದರು.

ಪೊಲೀಸರಿಗೆ ಬಹುಮಾನ
ತನಿಖೆಗೆ ಒಟ್ಟು 11 ತಂಡ ರಚನೆ ಮಾಡಲಾಗಿದ್ದು, ಜಿಲ್ಲೆಯ ಹೆಚ್ಚಿನ ಪೊಲೀಸ್​ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಎಲ್ಲಾ ಮಾಹಿತಿಗಳನ್ನು ತನಿಖೆ ಮಾಡಿದ್ದೇವೆ. ತಂಡವಾಗಿ ಕೆಲಸ ಮಾಡಿದ್ದರಿಂದ ಶ್ರೀದಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಯಿತು. ಉತ್ತಮ ಕೆಲಸ ಮಾಡಿದ ಟೀಂಗೆ 1.5 ಲಕ್ಷ ರೂ. ಬಹುಮಾನ ನೀಡಲು ಐಜಿಪಿ ಮತ್ತು ಡಿಜಿಪಿಯವರಿಗೆ ಶಿಾರಸ್ಸು ಮಾಡಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net