ನೆರೆ ಸಂತ್ರಸ್ತರು ಭಯಪಡದೆ ಆರೋಗ್ಯ ಕಾಳಜಿ ವಹಿಸಲಿ

3
ಮಹಿಷವಾಡಗಿ ನೆರೆ ಪ್ರದೇಶಕ್ಕೆ ಮಾಜಿ ಶಾಸಕ ಮಹೇಶ ಕುಮಠಳ್ಳಿ ಭೇಟಿ ನೀಡಿದರು. ಅಪ್ಪಾಸಾಬ ಅವತಾಡೆ, ಗಿರೀಶ ಬುಟಾಳಿ, ಮಲ್ಲಪ್ಪ ಹಂಚಿನಾಳ ಇತರರು ಇದ್ದರು.
Published on

ನಂದೇಶ್ವರ: ಸಂತ್ರಸ್ತರು ನೆರೆ ಕುರಿತು ಭಯಪಡಬಾರದು. ಆರೋಗ್ಯ ಕುರಿತು ಕಾಳಜಿ ವಹಿಸಬೇಕು ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಸಮೀಪದ ಸತ್ತಿ, ಮಹಿಷವಾಡಗಿ, ಜನವಾಡ, ಸವದಿ-ದರ್ಗಾ, ಝೀರೋ ಪಾಯಿಂಟ್, ದೊಡವಾಡ ಗ್ರಾಮಗಳ ಪ್ರವಾಹ ಸಂತ್ರಸ್ತರ ಕಾಳಜಿ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿ ಮಾತನಾಡಿ, ಸಂತ್ರಸ್ತರಿಗೆ ಕುಡಿಯುವ ನೀರು, ಆಹಾರ, ದನಕರುಗಳಿಗೆ ಮೇವು ದೊರೆಯುವಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದರು.

ಅಪ್ಪಾಸಾಬ ಅವತಾಡೆ, ಗಿರೀಶ ಬುಟಾಳಿ, ಮಲ್ಲಪ್ಪ ಹಂಚಿನಾಳ, ಸುರೇಶಗೌಡ ಪಾಟೀಲ, ಆರ್.ಎಲ್.ಪಾಟೀಲ, ಮಹಾಂತೇಶ ಇಂಗಳಿ, ಮಹೇಶ ಪಾಟೀಲ, ಶ್ರೀಶೈಲ ಅಂದಾನಿ, ಬಸವರಾಜ ದಳವಾಯಿ, ಸುರೇಶ ಬಿರಡಿ, ಕುಮಾರ ಜಗದೇವ, ಶಿವಾನಂದ ಪಾಟೀಲ, ಸುರೇಶ ಅವಟಿ, ಶಿವಾನಂದ ಇಂಗಳಿ, ಮಾರುತಿ ಗುರವ, ಮುತ್ತಪ್ಪ ಚೌಲಗಿ, ಶಿವಾನಂದ ಕಾಂಬಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net