ಗಂಗಾವತಿಯ ತಾಲೂಕಿನಾದ್ಯಂತ ಸಂಭ್ರಮದ ನಾಗರ ಪಂಚಮಿ

NAGARA PANCHAMI
ಗಂಗಾವತಿ ಜೆಸ್ಕಾಂ ಕಚೇರಿ ಆವರಣದಲ್ಲಿರುವ ನಾಗರಹುತ್ತಕ್ಕೆ ಮಕ್ಕಳು ಮತ್ತು ಮಹಿಳೆಯರು ಹಾಲರೆಯುವ ಮೂಲಕ ನಾಗರ ಪಂಚಮಿ ಸಂಭ್ರಮದಿಂದ ಆಚರಿಸಿದರು.
Published on

ಗಂಗಾವತಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿ ನಾಗರ ಪಂಚಮಿ ನಿಮಿತ್ತ ಹಾಲೆರೆಯುವ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಕೋರ್ಟ್, ಜೆಸ್ಕಾಂ ಕಚೇರಿ ಆವರಣದಲ್ಲಿರುವ ಹುತ್ತಕ್ಕೆ ಮಹಿಳೆಯರು ಮತ್ತು ಮಕ್ಕಳು ಕೊಬ್ಬರಿ ಬಟ್ಟಲಲ್ಲಿ ಹಾಲೆರೆದು, ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಎಳ್ಳು, ಶೇಂಗಾ, ಕಡಲೇ, ಹೆಸರು ಸೇರಿ ವಿವಿಧ ಧಾನ್ಯಗಳಿಂದ ತಯಾರಿಸಿದ ಖಾದ್ಯಗಳ ನೈವೇದ್ಯ ಅರ್ಪಿಸಿದ ನಂತರ ನೆರಹೊರೆಯವರೊಂದಿಗೆ ಖಾದ್ಯಗಳ ವಿನಿಮಯ ಮಾಡಿಕೊಂಡರು.

ನೀಲಕಂಠೇಶ್ವರ, ಕೋಟೆ ವೀರಭದ್ರೇಶ್ವರ, ಈರಣ್ಣ ದೇವರ ಗುಡಿ, ಸರೋಜಾ ನಗರದ ಸುಬ್ರಹ್ಮಣ್ಯ ಸೇರಿ ವಿವಿಧ ದೇವಾಲಯದಲ್ಲಿರುವ ನಾಗರ ಕಟ್ಟೆಯಲ್ಲೂ ಮಹಿಳೆಯರು ಹಾಲೆರೆದು ಪೂಜೆ ನೆರವೇರಿಸಿದರು. ಸಂಪ್ರದಾಯದಂತೆ ಗ್ರಾಮೀಣ ಭಾಗದಲ್ಲಿ ಜೋಕಾಲಿ ಆಡುವುದರ ಜತೆಗೆ ದೇಸಿ ಊಟಕ್ಕೆ ಪ್ರಾಮುಖ್ಯತೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net