

ಶಿವಮೊಗ್ಗ: ದೇಶದ ಮೊದಲ ಪ್ರಧಾನಿ ಹುದ್ದೆಗೆ ಜವಾಹರಲಾಲ್ ನೆಹರು ಅವರ ಹೆಸರನ್ನು ಸೂಚಿಸಿದ್ದು ಮಹಾತ್ಮ ಗಾಂಧಿ. ದೇಶಕ್ಕೆ ಸ್ವಾತಂತ್ರೃ ಲಭಿಸಿದ ಸಂದರ್ಭದಲ್ಲಿ ಅನೇಕ ಸಂಕಷ್ಟಗಳಿದ್ದವು. ಅವುಗಳ ನಿವಾರಣೆಗೆ ಶ್ರಮಿಸಿದವರು ನೆಹರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಪುಣ್ಯಸ್ಮರಣೆಯಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಕೃಷಿಗೆ ಆದ್ಯತೆ ನೀಡಿದವರು ನೆಹರು. ವಿಜ್ಞಾನ, ಆರ್ಥಿಕ, ಕೈಗಾರಿಕೆ ಸೇರಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಅವರ ಕಾಲಘಟ್ಟದ ಸಾಧನೆಗಳನ್ನು ಹೊಸತಲೆಮಾರಿಗೆ ತಲುಪಿಸುವ ಕೆಲಸವಾಗಬೇಕಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ನೆಹರು ಅವರ ಕೊಡುಗೆ ಅಪಾರ. ಹುಟ್ಟಿನಿಂದಲೇ ಶ್ರೀಮಂತರಾಗಿದ್ದ ಕುಟುಂಬ ಅವರದು. ಆದರೆ ಇಂದಿಗೂ ಅವರ ಕುಟುಂಬಕ್ಕೆ ಕಳಂಕ ತರುವಂತಹ ಅಪಪ್ರಚಾರವನ್ನು ವಿಪಕ್ಷಗಳು ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖರಾದ ಎಸ್.ಟಿ.ಹಾಲಪ್ಪ, ಕಲೀಂ ಪಾಶಾ, ಎಸ್.ಟಿ.ಚಂದ್ರಶೇಖರ್, ವಿಜಯಲಕ್ಷ್ಮೀ ಪಾಟೀಲ್, ಶಿವಕುಮಾರ್, ಪ್ರವೀಣ್‌ಕುಮಾರ್, ಯು.ಶಿವಾನಂದ, ಶಿವಣ್ಣ, ಗಿರೀಶ್, ಮಧುಸೂಧನ್, ಗಂಗಾಧರ್, ಸಮೀನಾ ಕೌಸರ್, ಸ್ಟೆಲ್ಲಾ ಮಾರ್ಟಿನ್, ಸುಮತಿ, ಪರ್ವೀನ್ ಬಾನು, ಶಮೀನಾ ಬಾನು, ಅರ್ಚನಾ, ಚಂದ್ರಿಕಾ ಇತರರಿದ್ದರು.