ನೆಹರು ದೂರದೃಷ್ಟಿಯುಳ್ಳ ನಾಯಕ

Nehru was a visionary leader
ವಿಜಯಪುರ ಕಾಂಗ್ರೆಸ್​ ಕಚೇರಿಯಲ್ಲಿ ಭಾರತದ ಪ್ರಥಮ ಪ್ರಧಾನಿ ದಿ. ಪಂಡಿತ ಜವಾಹರಲಾಲ ನೆಹರು ಅವರ 60ನೇ ಪುಣ್ಯತಿಥಿಯನ್ನು ಆಚರಿಸಲಾಯಿತು. ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಷ ಕಾಲೇಭಾಗ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಕಾಂಗ್ರೆಸ್​ ಕಚೇರಿಯಲ್ಲಿ ಸೋಮವಾರ ಭಾರತದ ಪ್ರಥಮ ಪ್ರಧಾನಿ ದಿ. ಪಂಡಿತ ಜವಾಹರಲಾಲ ನೆಹರು ಅವರ 60ನೇ ಪುಣ್ಯತಿಥಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಜವಾಹರಲಾಲ ನೆಹರು ದೇಶಕ್ಕಾಗಿ ಮಾಡಿದ ಸೇವೆ ಸ್ಮರಿಸಲಾಯಿತು.

ಜಿಲ್ಲಾ ಕಾಂಗ್ರೆಸ್​ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, ಜವಾಹರಲಾಲ ನೆಹರು ಅವರು ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದಾಗಿ ಚಾಚಾ ನೆಹರು ಆಗಿದ್ದರು. ಭಾರತದ ಸ್ವಾತಂತ್ರ ಪಡೆದ ಸಮಯದಲ್ಲಿ ಭಾರತದ ನವಭಾರತ ಶಿಲ್ಪಿ ಎಂದು ಕರೆಯಲ್ಪಟ್ಟರು.

ಅವರೊಬ್ಬ ದೂರದೃಷ್ಟಿಯುಳ್ಳ ನಾಯಕ. ಮಕ್ಕಳನ್ನು ತುಂಬ ಹೃದಯದಿಂದ ಪ್ರೀತಿಸುತ್ತಿದ್ದ ನೆಹರು ಅವರು ತಮ್ಮ ಹುಟ್ಟು ಹಬ್ಬ ನವೆಂಬರ್​ 14 ರಂದು ಅವರ ಹೆಸರಿನಲ್ಲಿ ಆಚರಿಸದೇ ಮಕ್ಕಳ ದಿನಾಚರಣೆ ಎಂದು ಆಚರಿಸಲು ಕೋರಿದವರು ಎಂದರು.

ಮುಖಂಡರಾದ ಚಾಂದಸಾಬ ಗಡಗಲಾವ, ಸುಭಾಷ ಕಾಲೇಭಾಗ, ಅಫ್ಜಲ್​ ಜಾನವೆಕರ, ಕೆಪಿಸಿಸಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ವಿದ್ಯಾವತಿ ಅಂಕಲಗಿ, ವಸಂತ ಹೊನಮೊಡೆ, ಶರಣಪ್ಪ ಯಕ್ಕುಂಡಿ, ಹಾಜೀಲಾಲ ದಳವಾಯಿ, ಸಂತೋಷ ಬಾಲಗಾಂವಿ, ದಿಲೀಪ ಪ್ರಭಾಕರ, ಕೃಷ್ಣ ಲಮಾಣಿ, ವಿಜಯಕುಮಾರ ಕಾಳೆ, ಪ್ರದಿಪ ಸೊರ್ಯಂಶಿ, ಪರಶುರಾಮ ಹೊಸಮನಿ, ವಿರೇಶ ಕಲಾಲ, ಡಿ.ಎಚ್​. ಕಲಾಲ, ದೇಸು ಚವಾಣ, ಗುಲಾಬ ಚವಾಣ, ಮಹಾದೇವ ಜಾಧವ ಮತ್ತಿತತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net