

ವಿಜಯಪುರ: ಪಂಡಿತ ಜವಾಹರಲಾಲ್ ನೆಹರು ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಂಡು ಸುಮಾರು ವರ್ಷಗಳ ಕಾಲ ಸೆರೆಮನೆ ವಾಸದಲ್ಲಿದ್ದು, ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದವರು ಎಂದು ಮುಖಂಡ ಅಬ್ದುಲ ಹಮೀದ್ ಮುಶ್ರೀಫ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ದಿ. ಜವಾಹರಲಾಲ ನೆಹರು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರು ಸ್ವಾತಂತ್ರೃ ಭಾರತದ ಮೊದಲ ಪ್ರಧಾನಮಂತ್ರಿಯಾಗಿ ಆಧುನಿಕ ಭಾರತ ಅಡಿಗಲ್ಲು ಹಾಕಿದ ಧೀಮಂತ ನಾಯಕರಾಗಿದ್ದರು ಎಂದು ಅವರು ಸ್ಮರಿಸಿದರು.
ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಕಾಲೇಬಾಗ, ಅಶ್ಪಾಕ ಮನಗೂಳಿ, ಪ್ರಧಾನ ಕಾರ್ಯದರ್ಶಿಗಳಾದ ಜಾಕೀರ ಅಹ್ಮದ ಮುಲ್ಲಾ, ಎಂ.ಎಂ. ಮುಲ್ಲಾ, ವಸಂತ ಹೊನಮೋಡೆ, ವಿಜಯಕುಮಾರ ಘಾಟಗೆ, ದೇಸು ಚವಾಣ, ಶರಣಪ್ಪ ಯಕ್ಕುಂಡಿ, ಮಹಾದೇವ ಜಾಧವ, ಸಾಹೇಬಗೌಡ ಬಿರಾದಾರ, ಎಂ.ಬಿ. ಮೆಡೆಗಾರ, ಕೃಷ್ಣಾ ಲಮಾಣಿ, ದಸ್ತಗೀರಬಾಷಾ ಬಡಗಾಲ, ಎನ್.ಎ. ಕಂದಗಲ್, ಫಯಾಜ ಕಲಾದಗಿ, ಎನ್.ಎಂ. ಮುಜಾವರ, ಇಲಿಯಾಸ ಅಹ್ಮದ ಸಿದ್ದಿಕಿ, ಜಿ.ಎಂ. ಯಾಳವಾರ, ಅಬುಬಕರ ಕಂಬಾಗಿ ಮತ್ತಿತರರಿದ್ದರು.