ನೆಹರೂ ತಪ್ಪು ಸುಧಾರಿಸಲು ಇನ್ನೂ ಶ್ರಮಿಸಬೇಕು, ಸಂಸದ ಕಾಗೇರಿ ಟೀಕೆ

Visheshweshwar hegde Kager
Published on

ಶಿರಸಿ: ಪ್ರಧಾನಿಯಾಗಿ ನೆಹರೂ ಮಾಡಿದ ತಪ್ಪನ್ನು ಸುಧಾರಿಸಲು ನಾವಿನ್ನೂ ಬಹಳಷ್ಟು ಶ್ರಮಿಸಬೇಕು. ದೊಡ್ಡ ಕೈಗಾರಿಕೆಗಳೇ ಆರ್ಥಿಕ ಶಕ್ತಿ ಎಂಬ ನೀತಿಯನ್ನು ನೆಹರು ಅನುಸರಿಸಿದ್ದರು. ಇದರ ಪರಿಣಾಮವಾಗಿ ಆಗ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಗುಡಿ ಕೈಗಾರಿಕೆಗಳಿಗೆ ಆದ್ಯತೆ ನೀಡಿ, ಹಳ್ಳಿಗಳನ್ನು ಆರ್ಥಿಕವಾಗಿ ಪ್ರಬಲವಾಗಿಸುತ್ತಿದ್ದಾರೆ. ಕಾಂಗ್ರೆಸ್ ಇಂದು ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


ನಗರದ ದೀನದಯಾಳ ಸಭಾಭವನದಲ್ಲಿ ಶನಿವಾರ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಘನತೆ ಕಳೆದುಕೊಂಡ ಸಿದ್ದರಾಮಯ್ಯ: ಸಿದ್ದರಾಮಯ್ಯ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವ ಕಾಪಾಡಿಕೊಳ್ಳಬೇಕು. ತಮ್ಮ ಪತ್ನಿಗೆ ನಿವೇಶನ ಹಂಚಿಕೆ ಮಾಡಿ ಘನತೆ ಕಳೆದುಕೊಂಡಿದ್ದಾರೆ. ಕಷ್ಟದಲ್ಲಿರುವವರಿಗೆ ಸ್ಪಂದಿಸಲು ಸಾಧ್ಯವಾಗದ ಸಿದ್ದರಾಮಯ್ಯ ಅವರಿಗೆ ಬಿಜೆಪಿ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಾಗೇರಿ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net