ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ನೆಹರು

14Naregal1
Published on

ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶಾಲಾ ಕಾಲೇಜ್​ಗಳಲ್ಲಿ ಶನಿವಾರ ಪಂ. ಜವಹರಲಾಲ್ ನೆಹರು ಅವರ ಜನ್ಮ ದಿನಾಚರಣೆ ಅಂಗವಾಗಿ ಮಕ್ಕಳ ದಿನ ಆಚರಿಸಲಾಯಿತು.

ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ನೆಹರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ದ ಭದ್ರ ಬುನಾದಿ ಹಾಕಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ. ಪಂಚವಾರ್ಷಿಕ ಯೋಜನೆ ಮೂಲಕ ಹಸಿರು ಕ್ರಾಂತಿ, ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಶ್ರಮಿಸಿದ್ದರು ಎಂದರು.

ಶಿಕ್ಷಕಿ ಸಾವಿತ್ರಿ ಮಾನ್ವಿ, ಮಲ್ಲಮ್ಮ ಶಿಳ್ಳಿನ, ಸುಮಾ ದಿಂಡೂರ, ಮಲ್ಲಿಕಾರ್ಜುನ ಕಡೆತೋಟದ, ವೀಣಾ ಪಾಟೀಲ, ವಿಜಯಲಕ್ಷ್ಮೀ ಜಾಧವ, ರಾಜೇಶ್ವರಿ ತೋಟಗಂಟಿ, ಐ.ಬಿ. ಒಂಟೇಲಿ, ಮೀನಾಕ್ಷಿ ದೇವರಾಜ, ಟಿ.ಎ. ಶಿಂಧೆ, ಸೀತಾ ಕುಲಕರ್ಣಿ, ರೇಖಾ ಸತ್ಯಣ್ಣವರ, ಗುರುಸಿದ್ದಮ್ಮ ಶಂಕ್ರಿಕೊಪ್ಪ, ಸುವರ್ಣಾ ಹಿರೇಮಠ, ಭೀಮವ್ವ ಅಂಗಡಿ, ಕುಮಾರಸ್ವಾಮಿ ಕೋಳಿವಾಡ, ಅಕ್ಕಮಹಾದೇವಿ ಗದಗಿನಮಠ, ವಿದ್ಯಾವತಿ ಗ್ರಾಮಪುರೋಹಿತ, ಅನ್ನಪೂರ್ಣ ಹೂಲಗೇರಿ, ನಾಗವೇಣಿ ಸಂಗನಾಳ, ಲಕ್ಷ್ಮೀ ನಡುವಿನಮನಿ ಇತರರಿದ್ದರು.

ಎಸ್​ಎವಿವಿಪಿ ಸಮಿತಿಯ ಕಿವುಡ ಮಕ್ಕಳ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಶಿಕ್ಷಕ ಆರ್.ಕೆ. ಬಾಗವಾನ ಮಾತನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಡಿ.ಜಿ. ಕುಲಕರ್ಣಿ, ಪ್ರೌಢ ವಿಭಾಗದ ಮುಖ್ಯ ಶಿಕ್ಷಕ ಎ.ಕೆ. ಕಡೆತೋಟದ, ಎ.ಸಿ. ಮರಡಿಮಠ, ಎಲ್.ಎಂ. ತಳಬಾಳ, ಬಿ.ಎಸ್. ಗಾಣಗೇರ, ಎಸ್.ವಿ. ಪಾಟೀಲ, ಆರ್.ಕೆ. ನಂದಿಕೋಲಮಠ, ಲಕ್ಷ್ಮಣ ಡಿ ಇತರರಿದ್ದರು. ಶಿಕ್ಷಕ ಎಸ್.ಎ. ಅರಮನಿ ನಿರ್ವಹಿಸಿದರು.

ಶ್ರೀ ಅನ್ನದಾನೇಶ್ವರ ವಿಜಯ ಪ್ರೌಢಶಾಲೆಯಲ್ಲಿ ನೆಹರು ಜನ್ಮ ದಿನ ಆಚರಿಸಲಾಯಿತು. ಶಿಕ್ಷಕ ಇಸ್ಮಾಯಿಲ್ ಆರಿ ಮಾತನಾಡಿದರು. ಮುಖ್ಯಶಿಕ್ಷಕ ಎಚ್.ಎಸ್.ಅಬ್ಬಿಗೇರಿ, ಎಸ್.ಬಿ.ಬೂದಿಹಾಳ, ಇಸ್ಮಾಯಿಲ್ ಆರಿ, ಎಂ.ವಿ.ಬಿಂಗಿ, ಎಲ್.ಎನ್.ನಾಯಕ, ಎಂ.ವಿ.ವೀರಾಪೂರ, ರತ್ನಮ್ಮ ಧಡೇಸೂರಮಠ, ಆರ್.ಎಚ್. ನದಾಫ್, ಮಹೇಶ ಹೋಂಬಳ, ಎಸ್.ಎ. ಗಾಣಿಗೇರಿ, ಆರ್.ಎಂ.ಗೋಳಬಾಳ ಇತರರಿದ್ದರು. ಶಿಕ್ಷಕ ಟಿ.ಬಿ.ಆಡೂರು ನಿರ್ವಹಿಸಿದರು.

ಅಬ್ಬಿಗೇರಿಯ ಶ್ರೀ ಅನ್ನದಾನ ವಿಜಯ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನ ಚರಿಸಲಾಯಿತು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಮಾತನಾಡಿದರು. ಡಾ.ಆರ್.ಬಿ.ಬಸವರಡ್ಡೇರ ಅಧ್ಯಕ್ಷತೆ ವಹಿಸಿದರು. ಐ. ಜ್ಞಾನೇಶ್ವರಿ, ಬಿ.ಬಿ. ಶೆಟ್ಟರ್, ಎಸ್.ವಿ. ಸೊಬರದ, ಎಸ್.ಜಿ. ಗಿರಿತಿಮ್ಮಣ್ಣವರ ಇದ್ದರು. ಶಿಕ್ಷಕ ಎಂ.ಎಂ.ಗುಗ್ಗರಿ ನಿರ್ವಹಿಸಿದರು.

ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಡಾ. ಸಂಗಮೇಶ ತಮ್ಮನಗೌಡ್ರ, ಮಕ್ಕಳ ಹಕ್ಕು, ಹಿತರಕ್ಷಣೆ, ಯೋಗಕ್ಷೇಮ, ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಅಭಿವೃದ್ಧಿಗೆ ಶ್ರಮಿಸುವ ಉದ್ದೇಶದಿಂದ ಮಕ್ಕಳ ದಿನ ಆಚರಿಸಲಾಗುತ್ತದೆ ಎಂದರು. ಸಿ.ಕೆ. ಕೇಸರಿ, ಬಿ.ವಿ. ದೇಸಾಯಿಪಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net