

ಕೊಪ್ಪ: ಇಂದಿರಾಗಾಂಧಿ ದೇಶದ ಆರ್ಥಿಕ ಸ್ವಾವಲಂಬನೆಗೆ ಪಂಚ ವಾರ್ಷಿಕ ಯೋಜನೆಗಳನ್ನು ಅನುಷ್ಟಾನಗೊಳಿಸುವ ಮೂಲಕ ದೇಶವನ್ನು ಸದೃಢ ಸ್ಥಿತಿಗೆ ತಂದಿದ್ದಾರೆ. ನೆಹರೂ ಕುಟುಂಬ ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ ಎಂದು ಜಿಪಂ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ತುರ್ತು ಪರಿಸ್ಥಿತಿ ತರದಿದ್ದರೆ ನಮ್ಮಂತಹ ಸಾಮಾನ್ಯ ಜನರು ಬ್ಯಾಂಕ್ ವ್ಯವಹಾರ ಮಾಡಲು ಸಾಧ್ಯವಿರಲಿಲ್ಲ .ಉದಾರೀಕರಣ, ಆರ್ಥಿಕ ನೀತಿ ಬರಲು ಸಾಧ್ಯವಿರಲಿಲ್ಲ ಎಂದರು.
ಪಾಕಿಸ್ತಾನದ ಉಪಟಳ ಸಂದರ್ಭದಲ್ಲಿ ಬಾಂಗ್ಲಾ ಪ್ರತ್ಯೇಕ ದೇಶ ಸೃಷ್ಠಿ ಮಾಡಿದರು. ದೇಶದ ಭೂ ರಹಿತರಿಗೆ ಭೂಮಿ ದೊರೆಯಿತು. ಅಪ್ಪ ಗೇಣಿದಾರನಾಗಿದ್ದ, ಮಗ ಖಾತೆದಾರನಾಗಿದ್ದಾನೆ. ಬಹುತೇಕರಿಗೆ ತಮಗೆ ಕೃಷಿ ಭೂಮಿ ಎಲ್ಲಿಂದ ಬಂತು ಎಂದು ಗೊತ್ತಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದರು ಎಂದರು.
ಕೆಪಿಸಿಸಿ ಸದಸ್ಯ ಬಾಳೆಮನೆ ನಟರಾಜ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಶಶಿಕುಮಾರ್, ತಾಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷ ಕೆ.ಜಿ.ಶೋಭಿಂತ್, ಸದಸ್ಯೆ ಅನ್ನಪೂರ್ಣ ನರೇಶ್ ಇದ್ದರು.