ನೆಹರು ಕಾಲೇಜ್ ವನಿತೆಯರ ತಂಡ ಪ್ರಥಮ

COLLEGE SPORTS
Published on

ಹುಬ್ಬಳ್ಳಿ: ಇಲ್ಲಿನ ಶ್ರೀ ಶರಾಣ ನುಲಿಯ ಚಂದಯ್ಯ ಡಾ. ಬಿ.ಆರ್. ಅಂಬೇಡ್ಕರ್ ಕಾಲೇಜ್‌ನಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಮಹಿಳೆಯರ ಅಂತರ ಮಹಿಳಾ ಕಾಲೇಜ್‌ನ ಏಕ ವಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ವಿಶ್ವ ವಿದ್ಯಾಲಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಯಿತು.

ಎಸ್‌ಎಸ್‌ಎನ್‌ಸಿ ಅಂಬೇಡ್ಕರ್ ಕಾಲೇಜ್‌ನ ಕಾರ್ಯದರ್ಶಿ ಜಿ.ಕೆ. ಗೋಕಾಕ ಪಂದ್ಯಾವಳಿಗೆ ಚಾಲನೆ ನೀಡಿದರು.

ವಿವಿಧ ಕಾಲೇಜ್‌ಗಳ ಆರು ತಂಡಗಳು ಪಾಲ್ಗೊಂಡಿದ್ದವು. ಹುಬ್ಬಳ್ಳಿ ನೆಹರು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಯದ ತಂಡ ಪ್ರಥಮ, ಗದಗ ಜಿಲ್ಲೆ ಗಜೇಂದ್ರಗಡದ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯ ತಂಡ ದ್ವಿತೀಯ, ಧಾರವಾಡದ ಸಿಎಸ್‌ಐ ವಾಣಿಜ್ಯ ಮಹಾವಿದ್ಯಾಲಯ ತಂಡ ತೃತೀಯ ಸ್ಥಾನ ಪಡೆಯಿತು.

ಬಳಿಕ ವಿಶ್ವ ವಿದ್ಯಾಲಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಯಿತು. ದೈಹಿಕ ಶಿಕ್ಷಣ ನಿರ್ದೇಶ ಕೆ. ಕೊಟ್ರೇಶ, ಪ್ರಭಾರಿ ಪ್ರಾಚಾರ್ಯ ಪಿ.ಎಸ್. ಚಪ್ಪರಮನಿ, ಡಾ. ಐ.ಎಂ. ಮಕ್ಕುಬಾಯಿ, ಎಲ್.ಕೆ. ವದ್ನಾಲ, ಡೆನಿಲ್ ಪ್ರವೀಣಕುಮಾರ, ಡಾ. ಸ್ವಪ್ನಾ ಜಾಧವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net