ಎರಡು ಸಾವಿರದ ವಿಚಾರಕ್ಕೆ ನಡೆಯಿತಾ ಕೊಲೆ? ಇಬ್ಬರ ಬಂಧನ !

20231107_035538
Published on

ಪುತ್ತೂರು: ಕ್ಷುಲ್ಲಕ ಕಾರಣ ಮಾತುಕತೆ ನಡೆದು ಕಲ್ಲೇಗ ಟೈಗರ್ ಮುಖ್ಯಸ್ಥನನ್ನು ಮಾಣಿ ಮೈಸೂರು ಹೆದ್ದಾರಿಯ ನೆಹರು ನಗರ ಜಂಕ್ಷನ್ ನಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿದೆ.

ಕಲ್ಲೇಗ ಪೋಳ್ಯ ನಿವಾಸಿ ಅಕ್ಷಯ್ ಕಲ್ಲೇಗ (26) ಮೃತ ವ್ಯಕ್ತಿ. ಬನ್ನೂರು ನಿವಾಸಿ ಮನೀಷ್, ಚೇತು ಅವರು ಠಾಣೆಗೆ ಶರಣಾಗಿದ್ದು, ಓರ್ವ ತಲೆಮಲೆಸಿಕೊಂಡಿದ್ದಾನೆಂದು ಹೇಳಲಾಗಿದೆ.

ನೆಹರು ನಗರದಲ್ಲಿ ಸಾಯಂಕಾಲ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಮಾತುಕತೆ ಆರಂಭವಾಗಿದೆ. ಈ ಸಂದರ್ಭ ಎರಡು ಸಾವಿರ ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ತೆರಳಿದ್ದು, ಬಸ್ ಚಾಲಕ ಚೇತು ಅವರ ಬೆಂಬಲಿಗನಿಗೆ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದುವೇ ವಿಕೋಪಕ್ಕೆ ಹೋಗಿ ರಾತ್ರಿ ಸುಮಾರು 11.30 ಸಮಯ ನೆಹರುನಗರದ ಕಾಲೇಜು ರಸ್ತೆಯಲ್ಲಿನ ಎಟಿಎಂ ಬಳಿಯಿಂದ ದಾಳಿ ಪ್ರಾರಂಭವಾಗಿದ್ದು, ಮುಖ್ಯ ರಸ್ತೆಯ ಇನ್ನೊಂದು ಭಾಗದ ಖಾಲಿ ಜಾಗದ ವರೆಗೆ ಅಟ್ಟಾಡಿಸಿ ತಲವಾರಿನಿಂದ ಮೂರಕ್ಕೂ ಅಧಿಕ ಮಂದಿಯ ತಂಡ ದಾಳಿ ನಡೆಸಿದೆ.

ಗಂಭೀರ ಗಾಯಗೊಂಡ ಅಕ್ಷಯ್ ಪೊದೆಗಳ ನಡುವೆ ಬಿದ್ದಿದ್ದು, 1ಗಂಟೆ ಸಮಯಕ್ಕೆ ಪೊಲೀಸರಿಗೆ ವಿಚಾರ ತೆಳಿದಿದೆ. ಸುಮಾರು 1.30ರ ಸುಮಾರಿಗೆ ವಿಚಾರ ಬಹಿರಂಗವಾಗಿದೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಎರಡು ಮಂದಿ ಪೋಲೀಸ್ ಠಾಣೆಗೆ ಶರಣಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಕೇವಲ ಅಪಘಾತದ ಹಣದ ವಿಚಾರಕ್ಕೆ ನಡೆಯಲು ಸಾಧ್ಯವಾ? ಇಲ್ಲಾ ಬೇರೆ ಕಾರಣಗಳು ಇದೆಯಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ನಡೆದ ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ.

ತಂದೆ ಚಂದ್ರಶೇಖರ, ತಾಯಿ ಕುಸುಮ, ಇಬ್ಬರು ಸಹೋದರರನ್ನು ಅಗಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net