ನೇಹಾ ಕೊಲೆಗಾರನಿಗೆ ಕಠಿಣ ಶಿಕ್ಷೆ ವಿಧಿಸಿ

Sandur Manavi
ತೋರಣಗಲ್ ನಾಡಕಚೇರಿಯಲ್ಲಿ ಉಪ ತಹಸೀಲ್ದಾರ್ ಸುಬ್ಬರಾವ್ ದೇಸಾಯಿಗೆ ಡಿವೈಎಫ್‌ಐ, ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು. ಸಿಐಟಿಯು, ಡಿವೈಎಫ್‌ಐ ಪ್ರಮುಖರಾದ ನಾಗಭೂಷಣ, ಎಚ್.ಸ್ವಾಮಿ, ಎ.ಸ್ವಾಮಿ, ರಿಜ್ವಾನ್, ರಾಹುಲ್, ಅಂಗನವಾಡಿ ಕಾರ್ಯಕರ್ತೆಯರಾದ ಶಂಕ್ರಮ್ಮ, ತಿಮ್ಮಕ್ಕ, ಪ್ರತಿಭಾ, ಸ್ವಾತಿ, ಮಲ್ಲಮ್ಮ ಇದ್ದರು.
Published on

ಸಂಡೂರು: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಡಿವೈಎಫ್‌ಐ, ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತೋರಣಗಲ್ ನಾಡಕಚೇರಿ ಉಪ ತಹಸೀಲ್ದಾರ್ ಸುಬ್ಬರಾವ್ ದೇಸಾಯಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಆಘಾತಕಾರಿ ಸಂಗತಿ. ಇದು ಪುರುಷ ಮನಸ್ಥಿತಿಯ ವಿಕಾರತೆ ತೋರಿಸುತ್ತದೆ. ಕೊಲೆಗೈದ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೆ ಕೆಲ ತಿಂಗಳ ಹಿಂದೆ ಉಡುಪಿಯಲ್ಲಿ ನಡೆದ ಗಗನಸಖಿ ಹಾಗೂ ಅವರ ಕುಟುಂಬವನ್ನು ಪ್ರವೀಣ್ ಎಂಬಾತ ಕ್ರೂರವಾಗಿ ಕೊಲೆ ಮಾಡಿದ್ದ.

ಇಲ್ಲಿ ಫಯಾಜ್ ಕೂಡ ನೇಹಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ತಕ್ಕಶಾಸ್ತಿ ಆಗಬೇಕು. ಇಂತಹ ಕೊಲೆಗಳನ್ನು ಮತೀಯ ದೃಷ್ಟಿಯಿಂದ ನೋಡುವುದು, ರಾಜಕೀಯವಾಗಿ ಬಳಸಿಕೊಳ್ಳುವುದು ಖಂಡನೀಯ. ಇಂಥ ಘಟನೆಗಳು ನಡೆದಾಗ ಎಲ್ಲರೂ ಒಗಟ್ಟಾಗಿ ಧ್ವನಿ ಎತ್ತಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net