ನೇಹಾ ಹಿರೇಮಠ ಕೊಲೆ ಪ್ರಕರಣ, ವಾದ ಮುಂದುವರಿಕೆ

court
Published on

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಿಚಾರಣೆಯಲ್ಲಿ ಫಿರ್ಯಾದುದಾರರನ್ನು ಪಕ್ಷಗಾರರನ್ನಾಗಿ ಪರಿಗಣಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಆರೋಪಿ ಫಯಾಜ್ ಪರ ವಕೀಲರು ಯಾವುದೇ ತಕರಾರು ಸಲ್ಲಿಸಲಿಲ್ಲ. ಹೀಗಾಗಿ ದೂರುದಾರರ ಪರ ವಕೀಲರು ಜು. 28ರಂದು ವಾದ ಮಂಡಿಸಲು ಇಲ್ಲಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಆರೋಪಿ ಪರ ವಕೀಲರು ಯಾವುದೇ ತಕರಾರು ಸಲ್ಲಿಸುವುದಿಲ್ಲ ಎಂದು ತಿಳಿಸಿದರು. ಪ್ರಕರಣದಲ್ಲಿ ಆರೋಪಿ ಪರ ವಕೀಲರು ಸರ್ಕಾರವನ್ನು ಮಾತ್ರ ಪ್ರತಿವಾದಿ ಪಕ್ಷಗಾರರನ್ನಾಗಿಸಲಾಗಿತ್ತು. ಆದರೆ, ಫಿರ್ಯಾದುದಾರರಾದ ಗೀತಾ ನಿರಂಜನಯ್ಯ ಹಿರೇಮಠ ಅವರು, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಫಿರ್ಯಾದುದಾರರು ಅಥವಾ ಸಂತ್ರಸ್ತರನ್ನು ಪಕ್ಷಗಾರರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net