ಎಲೆಚುಕ್ಕೆ ರೋಗಕ್ಕೆ ಪರಿಹಾರ ಕೊಡಿಸಲು ಸರ್ಕಾರದ ಜತೆ ಮಾತುಕತೆ: ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ

9hos1p belur
ಹೊಸನಗರ ತಾಲೂಕಿನ ನಾಗೋಡಿಯ ಎಲೆಚುಕ್ಕೆ ರೋಗ ಬಾಧಿತ ಅಡಕೆ ತೋಟಗಳನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿದರು. ವಿಶ್ವನಾಥ ನಾಗೋಡಿ, ಚಂದಯ್ಯ ಜೈನ್, ನಾಗೇಂದ್ರ ಜೋಗಿ, ಎ.ಒ.ರಾಮಚಂದ್ರ ಇತರರಿದ್ದರು.
Published on

ಹೊಸನಗರ: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲೂಕು ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಭಾನುವಾರ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರಾಜ್ಯ ಸರ್ಕಾರ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದೆ ಎಂದರು.
ಈ ವೇಳೆ ರೈತರು ಭೀಕರವಾಗಿ ಹರಡುತ್ತಿರುವ ಎಲೆಚುಕ್ಕೆ ರೋಗದ ಬಗ್ಗೆ ಗಮನ ಸೆಳೆದು, ಸರ್ಕಾರದ ಮಟ್ಟದಲ್ಲಿ ಪರಿಹಾರಕ್ಕೆ ಮಾತುಕತೆ ನಡೆಸುವಂತೆ ಮನವಿ ಮಾಡಿದರು.
ರೈತರ ಮನವಿಗೆ ಸ್ಪಂದಿಸಿದ ಶಾಸಕರು, ನಾಗೋಡಿಯಲ್ಲಿ ಎಲೆಚುಕ್ಕೆ ರೋಗಕ್ಕೆ ತುತ್ತಾದ ತೋಟಗಳ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಈ ಸಂಬಂಧ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಕೆ.ಬಿ.ಸರ್ಕಲ್, ಬೇಳೂರು, ಸಿಡ್ಲುಕುಣಿ, ಹೆಬ್ಬಿಗೆ, ಗುರುಟೆ ಗ್ರಾಮದ ಜಲಜೀವನ್ ಮಿಷನ್ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ನಿಟ್ಟೂರು ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷೆ ವಿನೋದಾ, ಸದಸ್ಯರಾದ ವಿಶ್ವನಾಥ ನಾಗೋಡಿ, ಚಂದಯ್ಯ ಜೈನ್, ಶೋಭಾ, ಶಾಸಕರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ನಿಟ್ಟೂರು ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ, ಎ.ಒ.ರಾಮಚಂದ್ರ, ರವೀಶ ಹೆಗಡೆ, ಜೆ.ವಿ.ಸುಬ್ರಹ್ಮಣ್ಯ, ಸುರೇಶ ಕೂಡ್ಲುಕೊಪ್ಪ, ಮೋಹನ ಶೆಟ್ಟಿ, ಓಂಕಾರ ಕೆ.ಬಿ.ಸರ್ಕಲ್, ಮಂಜುನಾಥ ಶೆಟ್ಟಿ, ಮಂಜಪ್ಪ ಬೆನ್ನಟ್ಟೆ, ಬಿ.ಎಚ್.ಸುರೇಶ್, ಉದಯ ಪೂಜಾರಿ, ಹರ್ಷ ಹೆಬ್ಬಿಗೆ, ಕೊಲ್ಲನಾಯ್ಕ ಗುರಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net