ರಾಷ್ಟ್ರೀಯ ಸಂಧಾನ ಸ್ಪರ್ಧೆ ಸಮಾರೋಪ, ಬೆಳಗಾವಿ ಆರ್ ಎಲ್ ಕಾಲೇಜು ಪ್ರಥಮ

IMG_20250406_202317_184-1.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಬಿವಿಬಿ ಕ್ಯಾಂಪಸ್ ನಲ್ಲಿರುವ ಜಿ.ಕೆ. ಕಾನೂನು ಮಹಾವಿದ್ಯಾಲಯದಲ್ಲಿ ಎರಡು ದಿನಗಳ ವರೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಸಂಧಾನ ಸ್ಪರ್ಧೆಯ ಸಮಾರೋಪ ಭಾನುವಾರ ಜರುಗಿತು.

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಿವಶಂಕರ ಅಮರನ್ನವರ ಅತಿಥಿಗಳಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾನೂನು ವಿದ್ಯಾರ್ಥಿಗಳು ಮತ್ತು ಯುವ ವಕೀಲರು ಸಂಧಾನದ ತತ್ವಗಳನ್ನು ಅರಿತುಕೊಂಡು ವ್ಯಾಜ್ಯಗಳನ್ನು ಎಲ್ಲ ಪಕ್ಷಗಾರರಿಗೂ ಒಳಿತಾಗುವ ರೀತಿಯಲ್ಲಿ ಸಂಧಾನ ಮತ್ತು ಮಧ್ಯಸ್ಥಿಕೆಯ ಮುಖಾಂತರ ಬಗೆ ಹರಿಸುವ ಪ್ರಯತ್ನ ಮಾಡಬೇಕು ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಐ. ಶಿಗ್ಲಿ, ಡಾ. ಜಿ.ಬಿ. ಪಾಟೀಲ, ವಕೀಲ ಎಂ.ಬಿ. ಹಿರೇಮಠ ಅವರು ಮಾತನಾಡಿದರು.

ಕೆಎಲ್ಇ ಕಾನೂನು ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಂ. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು.

ವಿಜೇತರು: ವಿವಿಧ ಕಾನೂನು ಕಾಲೇಜುಗಳ 22 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಕಾಲೇಜು ಪ್ರಥಮ, ಬೆಂಗಳೂರಿನ ಕ್ರಿಸ್ತು ಜಯಂತಿ ಕಾನೂನು ಕಾಲೇಜು ದ್ವೀತಿಯ ಸ್ಥಾನ ಪಡೆದುಕೊಂಡಿತು.

ಕಲಬುಗಿರ್ಯ ಸಿದ್ದಾರ್ಥ ಕಾನೂನು ಕಾಲೇಜು ಮತ್ತು ಕೆಎಲ್ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಕಾಲೇಜು ಸಮಾಧಾನಕರ ಬಹುಮಾನ ಪಡೆದುಕೊಂಡವು.

ಬೆಳಗಾವಿಯ ಉಜ್ವಲಾ ಹವಾಲ್ದಾರ ಅತ್ಯುತ್ತಮ ಸಮಾಲೋಚಕ ಪ್ರಶಸ್ತಿ ಮತ್ತು ಕೋಚಿನ್ ಯುನಿವರ್ಸಿಟಿ ಆಫ್ ಸೈನ್ಸ್ ಮತ್ತು ಟೆಕ್ನಾಲಾಜಿ ಇವರು ಸ್ಪಿರಿಟ್ ಆ್ ಜಿ.ಕೆ.ಎಲ್. ರಾಷ್ಟ್ರೀಯ ಸಂಧಾನ ಸ್ಪರ್ಧೆ ಪ್ರಶಸ್ತಿಯನ್ನು ಪಡೆದುಕೊಂಡರು.
ಸಿದ್ದಾರ್ಥ ಕಾನೂನು ಕಾಲೇಜು ಇವರು ಫೆಸಿಲಿಟೇಟರ್ ಆಯ್ಕೆ (ಟೀಮ್) ಪ್ರಶಸ್ತಿ ಪಡೆದುಕೊಂಡರು.

ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ಸ್ವಾಗತಿಸಿದರು. ಡಾ. ಸಂಜೀವ ಹುಳ್ಳೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net