ಮರ ತೆರವುಗೊಳಿಸದೆ ನಿರ್ಲಕ್ಷೃ

21-05-25--krs3 (1)
Published on

ಕೆ.ಆರ್.ಸಾಗರ: ವಿಶ್ವ ವಿಖ್ಯಾತ ಬೃಂದಾವನದ ದೋಣಿ ವಿಹಾರ ಕೇಂದ್ರದ ಮುಂಭಾಗದಲ್ಲಿ ಮರ ಬಿದ್ದು ಮೂರು ವರ್ಷ ಕಳೆದರೂ ತೆರವುಗೊಳಿಸದಿರುವುದು ಕಾವೇರಿ ನೀರಾವರಿ ನಿಗಮ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷೃ ತೋರಿಸಿವೆ.

100 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಯೋಜನೆ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಬಿದ್ದಿರುವ ಮರವನ್ನೇ ತೆರವುಗೊಳಿಸದೆ ನಿರ್ಲಕ್ಷೃ ತೋರಿಸಿದೆ. ಮೂರು ವರ್ಷಗಳ ಹಿಂದೆ ಬೀಸಿದ ಭಾರಿ ಗಾಳಿಗೆ ಬೃಂದಾವನದಲ್ಲಿ ಹಲವು ಮರ-ಗಿಡಗಳು ನೆಲಕ್ಕುರುಳಿವೆ. ದೋಣಿ ವಿಹಾರ ಕೇಂದ್ರದ ಮುಂಭಾಗ ಮರ ಬಿದ್ದಾಗ ಅಲ್ಲಿನ ಮರದ ಕೊಂಬೆಗಳನ್ನು ಮಾತ್ರ ತೆರವು ಮಾಡಿತ್ತು. ಅದರ ದೊಡ್ಡದಾದ ಬುಡವನ್ನು ಅಲ್ಲಿಯೇ ಬಿಟ್ಟ ಕಾರಣ ಅಲ್ಲಿ ಪ್ರವಾಸಿಗರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಇದೇ ರೀತಿ ಬೃಂದಾವನದಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಮರದ ಕೊಂಬೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಡಿಸಿದ್ದರು. ಅದನ್ನೂ ತೆರವುಗೊಳಿಸದೆ ಅಲ್ಲೇ ಬಿದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net