

ಬಾಳೆಹೊನ್ನೂರು: ಬಿಲ್ಲವ ಸಮುದಾಯಕ್ಕೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ಪಡೆಯುವಲ್ಲಿ ಸಮಾಜದ ವಿದ್ಯಾರ್ಥಿಗಳು ನಿರ್ಲಕ್ಷೃವಹಿಸುತ್ತಿರುವುದು ವಿಷಾದನೀಯ ಎಂದು ಕಳಸದ ವೈದ್ಯ ಡಾ.ಶಶಾಂಕ್ ಮುಕುಂದ್ ಕಿಶೋರ್ ಹೇಳಿದರು.
ಪಟ್ಟಣದ ಬಿಲ್ಲವ ಸಮಾಜ ಸೇವಾ ಸಂಘ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ, ಗುರು ಜಯಂತಿ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಲ್ಲವ ಸಮುದಾಯದ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿರ್ಲಕ್ಷೃ ವಹಿಸುತ್ತಿರುವ ಹಿನ್ನಲೆಯಲ್ಲಿ ಸಾವಿರಾರು ರೂ. ವಿದ್ಯಾರ್ಥಿ ವೇತನ ಕೈತಪ್ಪಿ ಹೋಗುತ್ತಿದೆ. ವಿದ್ಯಾರ್ಥಿಗಳು ಮುಂದೆ ಬರಬೇಕೆಂಬ ಪರಿಕಲ್ಪನೆ ಯುವ ಸಮುದಾಯಕ್ಕೆ ಬರಬೇಕಿದೆ. ಶಿಕ್ಷಣದ ವಿಚಾರದಲ್ಲಿ ಎಲ್ಲರೂ ಕ್ರಿಯಾಶೀಲರಾಗಬೇಕು ಎಂದರು.
ಶಿಕ್ಷಕಿ ಪ್ರಕೃತಿ ನಿಖಿಲೇಶ್ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಶಿಕ್ಷಣವಂತರಾಗಬೇಕು. ಬದುಕಿನಲ್ಲಿ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಸಮಾನತೆ, ಸ್ವಾವಲಂಬನೆ, ಸರಳತೆ, ಸ್ವ ಉದ್ಯೋಗ, ಅಳವಡಿಸಿಕೊಳ್ಳಬೇಕು. ಮೌಲ್ಯಾಧಾರಿತ ಶಿಕ್ಷಣ ಕೊಟ್ಟಾಗ ಮಾತ್ರ ಸಮುದಾಯದ ಅಭಿವೃದ್ಧಿಯಾಗುತ್ತದೆ ಎಂದರು.
ಪೊಲೀಸ್ ಸಿಬ್ಬಂದಿ ಶಿವಾನಂದ್, ವೈದ್ಯೆ ಎಂ.ಶಾಶ್ವತಿ, ಶಿಕ್ಷಕಿ ಬಿ.ಆರ್.ಸ್ವಪ್ನ, ಪ್ರಕೃತಿ ಅವರನ್ನು ಸನ್ಮಾನಿಸಲಾಯಿತು. ಶಾಲೆಗೆ ಹೋಗದೇ ಪದವಿ ಪಡೆದ ಅರಳೀಕೊಪ್ಪದ ದೀಪಿಕಾ, ಭೂಮಿಕಾ, ರೋಹನ್ ಅವರನ್ನು ಗೌರವಿಸಲಾಯಿತು. 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ.ವಿದ್ಯಾರ್ಥಿ ವೇತನ ನೀಡಲಾಯಿತು.
ಪ್ರಮುಖರಾದ ಸಂಜೀವ, ಎನ್.ಶಶಿಧರ್, ಮಹಲ್ಗೋಡ್ ಶ್ರೀನಿವಾಸ್, ಪಾರ್ವತಮ್ಮ, ಪ್ರಕಾಶ್, ಪುರುಷೋತ್ತಮ್, ರಾಮ. ಡಿಸಾಲಿಯಾನ, ಶೇಖರ, ವಾಸುದೇವ, ಜಯಪ್ರಭಾಕರ್, ಸತೀಶ್ ಅರಳೀಕೊಪ್ಪ, ಚಂದ್ರಹಾಸ ಇದ್ದರು.