ಕನ್ನಡ ಧ್ವಜ ಹಾರಿಸದೆ ನಿರ್ಲಕ್ಷೃ

ಸರಗೂರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ಕಂಬ ಖಾಲಿಯಾಗಿರುವುದು.
ಸರಗೂರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ಕಂಬ ಖಾಲಿಯಾಗಿರುವುದು.
Published on

ಸರಗೂರು: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡ ಧ್ವಜ ಹಾರಿಸದೆ ನಿರ್ಲಕ್ಷೃ ಮಾಡಲಾಗಿದೆ.

ಧ್ವಜ ಹಾರಿಸುವ ಸಂಬಂಧ ಸರ್ಕಾರದ ಸುತ್ತೋಲೆ ಇದ್ದರೂ ಕಾಲೇಜಿನ ಪ್ರಾಂಶುಪಾಲ ಹಾಗೂ ಉಪನ್ಯಾಸಕರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕನ್ನಡಾಭಿಮಾನಿಗಳು ಆರೋಪಿಸಿದ್ದಾರೆ.

ಪಟ್ಟಣದ ಬಿಡಗಲು ಗ್ರಾಮದ ಬಳಿಯಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಬಾವುಟದ ಹಾರಾಟ ಕಂಡಿಲ್ಲ. ಇದು ಉದ್ದೇಶ ಪೂರ್ವಕವೋ ಅಥವಾ ತಿಳಿಯದೆ ಮಾಡಿರುವುದೋ ಎಂಬುದು ಮಾತ್ರ ತಿಳಿದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net