ಕನ್ನಡ ಹೋರಾಟಗಾರರ ಕಡೆಗಣನೆ

ಎಸ್ ಕೆ ರಾಜುಗೌಡ
Published on

ತಿ.ನರಸೀಪುರ: ನವೆಂಬರ್ 1 ರಂದು ರಾಜ್ಯ ಸರ್ಕಾರ ನಾಡಿನ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಸರ್ಕಾರ ಆಯ್ಕೆ ಸಲಹಾ ಸಮಿತಿಯನ್ನು ರಚಿಸಿರುವುದು ಸ್ವಾಗತಾರ್ಹ. ಆದರೆ ಸಮಿತಿಯಲ್ಲಿ ಕನ್ನಡ ಕ್ಷೇತ್ರವನ್ನೇ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕನ್ನಡಪರ ಹೋರಾಟಗಾರ ಎಸ್.ಕೆ.ರಾಜೂಗೌಡ ಆರೋಪಿಸಿದ್ದಾರೆ.

ಸಮಿತಿಯಲ್ಲಿ ಕನ್ನಡಪರ ಹೋರಾಟಗಾರರಿಗೆ ಸರ್ಕಾರ ಆದ್ಯತೆ ಮತ್ತು ಅವಕಾಶ ನೀಡಬೇಕು. ಕೂಡಲೇ ಕನ್ನಡಪರ ಹೋರಾಟಗಾರರಿಗೆ ಆಯ್ಕೆ ಸಲಹಾ ಸಮಿತಿಯಲ್ಲಿ ಅವಕಾಶ ನೀಡಬೇಕು. ಜತೆಗೆ ಪ್ರಶಸ್ತಿ ಆಯ್ಕೆಯಲ್ಲಿ ಶೇ.50ರಷ್ಟು ಆದ್ಯತೆ ನೀಡಬೇಕೆಂದು ರಾಜೂಗೌಡ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net