ಡಿ.15ರಂದು ನೇಗಿಲಧರ್ಮ ಚಿತ್ರ ತೆರೆಗೆ: ನಿರ್ಮಾಪಕ ಎಸ್.ಕೃಷ್ಣ ಸ್ವರ್ಣಸಂದ್ರ ಮಾಹಿತಿ

Negila Dharma film team press conference mandya
Published on

ಮಂಡ್ಯ: ರೈತರ ಕುರಿತು ಕಥಾಹಂದರ ಹೊಂದಿರುವ ನೇಗಿಲ ಧರ್ಮ ಚಿತ್ರವನ್ನು ಡಿ.15ರಂದು ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕ ಎಸ್.ಕೃಷ್ಣ ಸ್ವರ್ಣಸಂದ್ರ ತಿಳಿಸಿದರು.

ಅತಿಯಾಸೆ ಗತಿಕೇಡು ಎನ್ನುವ ಕಥೆಯನ್ನು ಆಧರಿಸಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್‌ನಡಿ ಚಿತ್ರ ನಿರ್ಮಾಣ ಮಾಡಲಾಗಿದೆ. ಸುಮಾರು 25 ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಬಹುತೇಕ ಚಿತ್ರೀಕರಣ ನಡೆದಿದ್ದು, ಅಂದಾಜು 30 ಲಕ್ಷ ರೂ ವೆಚ್ಚ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾಯಕ ನಟ ಮದನ್‌ಗೌಡ ಮಾತನಾಡಿ, ರೈತರು ದೇಶದ ಬೆನ್ನೆಲುಬು. ಎಲ್ಲ ರಂಗಕ್ಕೂ ಕೃಷಿ ಆಧಾರಸ್ತಂಭವಾಗಿದೆ. ಜಗತ್ತಿಗೆ ಅನ್ನ ಹಾಕುವ ರೈತರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಮತ್ತೊಂದೆಡೆ ರೈತರೆಂದರೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ವಾಸ್ತವವಾಗಿ ದೇಶಕ್ಕೆ ರೈತರು ಎಷ್ಟು ಮುಖ್ಯ ಎನ್ನುವ ಅಂಶವನ್ನು ಚಿತ್ರದಲ್ಲಿ ಕಾಣಬಹುದು. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವಂತೆ ಮನವಿ ಮಾಡಿದರು.

ಸಹ ನಿರ್ದೇಶಕ ರವಿಸೂರ್ಯ, ಕರವೇ ಜಿಲ್ಲಾಧ್ಯಕ್ಷ ಶಂಕರೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net