ನಕಾರಾತ್ಮಕ ಬೆಳವಣಿಗೆ ಮೇಲೂ ಬೆಳಕು ಚೆಲ್ಲಿ

10RAVIG4-1_Web
ಗುರುಪೂರ್ಣಿಮೆ ಕಾರ್ಯಕ್ರಮವನ್ನು ಶಂಕರಗೌಡ ಪಾಟೀಲ ಉದ್ಘಾಟಿಸಿದರು. ಪ್ರಸಾದ ಪ್ರಭು, ಜಯವಂತ ಮಂತ್ರಿ, ವಿಜಯ ಮೋರೆ, ಕುಂತಿನಾಥ ಕಲಮನಿ, ರವಿ ನಾಯಿಕ ಇತರರು ಇದ್ದರು.
Published on

ಬೆಳಗಾವಿ: ಸಕಾರಾತ್ಮಕ ಘಟನೆಗಳ ಜತೆಗೆ ನಕಾರಾತ್ಮಕ ಬೆಳವಣಿಗೆ ಮೇಲೂ ಬೆಳಕು ಚೆಲ್ಲಿ ಸರಿಪಡಿಸುವ ಕಾರ್ಯ ಪತ್ರಕರ್ತರಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ನೆಹರು ನಗರದಲ್ಲಿನ ಬೆಳಗಾವಿಯ ಪತ್ರಕಾರ ವಿಕಾಸ ಅಕಾಡೆಮಿ ಯಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರ ಪ್ರಾಮಾಣಿಕ, ನಿಸ್ವಾರ್ಥ ಸೇವೆ ಸ್ಮರಣೀಯ ಎಂದರು. ಅಕ್ಕಲಕೋಟ ಸ್ವಾಮಿ ಮತ್ತು ಮರಾಠಿ ಪತ್ರಿಕೋದ್ಯಮದ ಜನಕ ಆಚಾರ್ಯ ಬಾಳಶಾಸ್ತ್ರೀ ಬಾಂಬೇಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಪ್ರಸಾದ ಪ್ರಭು, ಪ್ರಶಾಂತ ಬರ್ಡೆ, ಜಯವಂತ ಮಂತ್ರಿ, ವಿಜಯ ಮೋರೆ, ವೈಜನಾಥ ಪಾಟೀಲ, ಉಮೇಶ ಮಜುಕರ, ಪ್ರಕಾಶ ಬೆಳಗೊಜಿ, ಕುಂತಿನಾಥ ಕಲಮನಿ, ರವಿ ನಾಯಿಕ, ಜಗದೀಶ ದಡ್ಡಿಕರ, ರಮೇಶ ಹಿರೇಮಠ, ಡಿ.ಕೆ. ಪಾಟೀಲ, ಚಂದ್ರಕಾಂತ ಕುಪಾಟೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net