

ಮಂಗಳೂರು : ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್
ಟೆಕ್ನಾಲಜಿಯಲ್ಲಿ ಅದಾನಿ ಸಿಮೆಂಟ್ ಮತ್ತು ಎಸಿಸಿ ಸಿಮೆಂಟ್ ವತಿಯಿಂದ ಹಾಗೂ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್
ವಿಭಾಗದ ಸಹಭಾಗಿತ್ವದಲ್ಲಿ ಕೌಶಲ ಅಭಿವೃದ್ಧಿ ನೀವ್ ಅಭಿಯಾನ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 75 ಸಿವಿಲ್ ಇಂಜಿನಿಯರಿಂಗ್ ಗುತ್ತಿಗೆದಾರರು ಮತ್ತು ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.
ಅದಾನಿ ಸಿಮೆಂಟ್ ಸಂಸ್ಥೆಯ ಕರ್ನಾಟಕ ವಲಯದ ತಾಂತ್ರಿಕ ವಿಭಾಗದ ಮುಖ್ಯಸ್ಥ ಹಿತೇಶ್ ಪ್ರಸಾದ್ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ ವಿ.ವಿ.ಯ ಉಪ ಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀನಿವಾಸ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಮುಖ್ಯಸ್ಥ ಡಾ.ಬಿ.ಎಸ್. ಪ್ರವೀಣ್ ಕುಮಾರ್
ಮತ್ತು ಅದಾನಿ ಸಿಮೆಂಟ್ ಸಂಸ್ಥೆಯ ಮಂಗಳೂರು ವಲಯದ ತಾಂತ್ರಿಕ ವಿಭಾಗದ ಉಪ ವ್ಯವಸ್ಥಾಪಕ ರಜತ್.ವಿ.ಜಿ .ಮುಖ್ಯ
ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾದ ಪ್ರೊ. ಶಿಲ್ಪಾ ಎಸ್, ಸಂಗ್ರಾಮ್
ಶ್ರೀಯಾನ್, ವಿದ್ಯಾರ್ಥಿ ಸಂಘಟನೆ ಸೃಷ್ಟಿಕ ಅಧ್ಯಕ್ಷ ವರುಣ್.ಎನ್. ಮಧ್ಯಸ್ಥ, ಕಾರ್ಯದರ್ಶಿ ರತನ್ ರಮೇಶ್ ಪುತ್ರನ್, ಸೃಷ್ಟಿಕ ಎಂಟೆಕ್ ಪದಾಧಿಕಾರಿಗಳಾದ ಶ್ರೀವತ್ಸ ಎಸ್ ಭಟ್, ನಯನ ಎಸ್ ಮತ್ತು ಆಕಾಶ್ ಎಂ. ಎಸ್. ಉಪಸ್ಥಿತರಿದ್ದರು.ಪ್ರೊ. ಕೆ. ಶ್ರೀನಾಥ್ ರಾವ್ ಸ್ವಾಗತಿಸಿ, ರಜತ್.ವಿ.ಜಿ.ವಂದಿಸಿದರು. ರಾಹುಲ್ ರಾಜೇಶ್ ರೈ ಕಾರ್ಯಕ್ರಮ ನಿರೂಪಿಸಿದರು.