ಜು.6ಕ್ಕೆ ಆರ್ಯ ಅಕಾಡೆಮಿಯಿಂದ ನೀಟ್, ಜೆಇಇ ಕಾರ್ಯಾಗಾರ

Arya Academy Ramesh
ಶಿವಮೊಗ್ಗದ ಆರ್ಯ ಅಕಾಡೆಮಿ ಕಾರ್ಯದರ್ಶಿ ಎನ್.ರಮೇಶ್.
Published on

ಶಿವಮೊಗ್ಗ: ಶಿವಮೊಗ್ಗದ ಆರ್ಯ ಅಕಾಡೆಮಿಯಿಂದ ನೀಟ್ ಮತ್ತು ಜೆಇಇ ಕಾರ್ಯಾಗಾರವನ್ನು ಜು.6ರಂದು ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.

ಜಿಲ್ಲೆಯಲ್ಲಿ ನೀಟ್-ಜೆಇಇ ಇನ್ನಿತರ ಪರೀಕ್ಷೆಗಳಿಗೆ ಸಮರ್ಪಕ, ನಂಬಿಕಾರ್ಹ, ವಿದ್ಯಾರ್ಥಿಸ್ನೇಹಿ ಅನುಭವಿ ಉಪನ್ಯಾಸಕರಿರುವ, ಲಿತಾಂಶ ಖಚಿತತೆ ಸಿಗಬೇಕೆನ್ನುವ ದೃಷ್ಟಿಯಿಂದ ವಿದ್ಯಾರ್ಥಿಗಳ ಬಹುದಿನದ ಕನಸು ನನಸು ಮಾಡಲು ಅಕಾಡೆಮಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿಡಿಪಿಯು ಕೃಷ್ಣಪ್ಪ ಕಾರ್ಯಾಗಾರ ಉದ್ಘಾಟಿಸುವರು. ನಂಜಪ್ಪ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ವಾಣಿಕೋರಿ ಮತ್ತು ಸುಬ್ಬಯ್ಯ ಮೆಡಿಕಲ್ ಕಾಲೇಜಿನ ತಜ್ಞ ಡಾ. ವಿನಾಯಕ್ ಅವರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು.
ರಾಷ್ಟ್ರಮಟ್ಟದ ಕೋಚಿಂಗ್ ಸಂಸ್ಥೆಗಳಲ್ಲಿ ಕನಿಷ್ಟ 30 ವರ್ಷ ಅನುಭವವಿರುವ ಉಪನ್ಯಾಸಕರ ತಂಡವು ಶಿವಮೊಗ್ಗ ನಗರವನ್ನು ಕೋಚಿಂಗ್ ಹಬ್ ಮಾಡುವ ದೃಷ್ಟಿಯಿಂದ ದಾಪುಗಾಲಿಡುತ್ತಿದೆ. ಈ ತಂಡದಲ್ಲಿ ಭೌತಶಾಸ ವಿಷಯದ ತಜ್ಞ ರಮಣ ಅಮರನೇನಿ, ರಸಾಯನ ಶಾಸ ವಿಷಯ ತಜ್ಞ ಚಂದ್ರಮೋಹನ್, ಗಣಿತ ತಜ್ಞ ಚಂದ್ರಶೇಖರ್ ಜೋಸ್ಯುಳ, ಜೀವಶಾಸ ವಿಷಯ ತಜ್ಞ ಚಂದ್ರಶೇಖರ್ ಕಣ್ಣನ್ ಕೈಜೋಡಿದ್ದಾರೆ ಎಂದರು.
ಪರಿಣಾಮಕಾರಿ ಅಧ್ಯಯನ ತಂತ್ರಗಳು ಮತ್ತು ಸಮಯ ನಿರ್ವಹಣೆ ತಂತ್ರಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೇಧಿಸಲು ವಿಷಯ, ನಿರ್ದಿಷ್ಟ ಸಲಹೆಗಳು ಮತ್ತು ತಂತ್ರಗಳು, ಸ್ಕೋರ್ ಮತ್ತು ಶ್ರೇಣಿ ಸುಧಾರಿಸಲು ಅನುಸರಿಸಬೇಕಾದ ತಂತ್ರಗಳು, ಸಾಮರ್ಥ್ಯ ಮತ್ತು ದೌರ್ಬಲ್ಯ ಹೇಗೆ ವಿಶ್ಲೇಷಿಸುವುದು ಎಂಬ ಬಗ್ಗೆ ತಿಳುವಳಿಕೆ, ಪರೀಕ್ಷಾ ತಯಾರಿ ಮತ್ತು ಒತ್ತಡ ನಿರ್ವಹಣೆ ಬಗ್ಗೆ ತಜ್ಞರ ಮಾರ್ಗದರ್ಶನ ಅಲ್ಲದೆ, ಅಕಾಡೆಮಿಯಿಂದ ನೀಟ್-ಜೆಇಇ ಕುರಿತು ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ನೀಟ್ ಹಾಗೂ ಜೆಇಇ ಬಗ್ಗೆ ಇರುವ ಸಂಶಯ ಗೊಂದಲಗಳಿಗೆ ಈ ಕಾರ್ಯಾಗಾರದಲ್ಲಿ ಖಚಿತವಾಗಿ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಜ್ಞ ಚಂದ್ರಶೇಖರ್ ಜೋಸ್ಯುಳ ಮಾತನಾಡಿ, ನೀಟ್ ರ‌್ಯಾಂಕಿಂಗ್‌ನಲ್ಲಿ ಬೇರೆ ಊರಿನ ಹೆಸರು ಕೇಳಿಬರುತ್ತಿತ್ತು. ಆದರೆ ಇನ್ಮುಂದೆ ಎನ್.ರಮೇಶ್ ಅವರ ಪ್ರಯತ್ನದಿಂದ ಶಿವಮೊಗ್ಗದಲ್ಲೇ ರಾಷ್ಟ್ರದಲ್ಲೇ ಅತ್ಯುತ್ತಮ ನೀಟ್ ತರಬೇತಿ ಸಿಗಲಿದೆ. ಮಾಹಿತಿಗೆ ದೂರವಾಣಿ(9916321139, 08182-251408)ಗೆ ಸಂಪರ್ಕಿಸಬಹುದು ಎಂದರು. ತಜ್ಞರಾದ ರಮಣ ಅಮರನೇನಿ, ಚಂದ್ರಮೋಹನ್, ಚಂದ್ರಶೇಖರ್ ಕಣ್ಣನ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net