ಪರಿಶ್ರಮದಿಂದ ಪರೀಕ್ಷೆಯಲ್ಲಿ ಸಾಧನೆ

6hbd1
Published on

ಹುಮನಾಬಾದ್: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸತತ ಪರಿಶ್ರಮದ ಮೂಲಕ ಗುರಿ ಮುಟ್ಟಲು ಮುಂದಾಗಬೇಕು ಎಂದು ಪ್ರಾಧ್ಯಾಪಕ ಡಾ.ಹನಮೇಗೌಡ ಹೇಳಿದರು.
ಹಳ್ಳಿಖೇಡ(ಬಿ)ದಲ್ಲಿ ಬಸವತೀರ್ಥ ವಿದ್ಯಾಪೀಠ ಪದವಿಪೂರ್ವ ವಿಜ್ಞಾನ ಕಾಲೇಜು ಹಾಗೂ ಬೆಂಗಳೂರಿನ ಲರ‍್ಸ್ ಆಫ್ ಟುಮಾರೋ ಸಂಸ್ಥೆ ಸಹಯೋಗದಡಿ ಹಮ್ಮಿಕೊಂಡ ನೀಟ್, ಕೆ.ಸೆಟ್, ಐಐಟಿ, ಜೆಇಇ ಪ್ರವೇಶ ಪರೀಕ್ಷೆ ತರಬೇತಿಗೆ ಭಾನುವಾರ ಚಾಲನೆ ನೀಡಿದ ಅವರು, ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕು ಎಂದರು.
ಸAಸ್ಥೆ ಕಾರ್ಯಾಧ್ಯಕ್ಷ ಕೇಶವರಾವ ತಳಘಟಕರ್ ಮಾತನಾಡಿ, ತರಬೇತಿಗೆ ಎಲ್ಲ ಪಾಲಕರು ಸಹಕಾರ ನೀಡಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ನಮ್ಮ ಶಿಕ್ಷಕರು ಕಂಕಣಬದ್ಧರಾಗಿದ್ದಾರೆ ಎಂದು ಹೇಳಿದರು.
ಸಂಸ್ಥೆ ಕೋಶಾಧ್ಯಕ್ಷ ಬಸವರಾಜ ಪಾಟೀಲ್ ಕಮಾಲಪುರ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಸೋಮಯ್ಯ ಹಿರೇಮಠ, ಕಾರ್ಯದರ್ಶಿ ರಮೇಶ ಮಹೇಂದ್ರಕರ್, ಆಡಳಿತಾಧಿಕಾರಿ ಗುಂಡಯ್ಯ ತೀರ್ಥ, ವಿಷಯ ಪರಿಣತ ಸಂಜೀವಕುಮಾರ ದೇಶಪಾಂಡೆ, ನರಸಪ್ಪ ಚೌಡೇಕರ್, ವಿದ್ಯಾವತಿ ತೀರ್ಥ, ಚಂದ್ರಕಾಂತ ಬಿರಾದಾರ, ಮಸ್ತಾನ್ ಪಟೇಲ್ ಇತರರಿದ್ದರು. ಸಂಗಮೇಶ ಪಾಟೀಲ್ ಸ್ವಾಗತಿಸಿದರು. ಸತೀಶ ಶಿಂಧೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net