ನೀಟ್‌ನಲ್ಲಿ ನೀರಜ್‌ಗೆ 565 ಅಂಕ: ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗೆ ಉಚಿತ ವೈದ್ಯಕೀಯ ಸೀಟು

12_09_Mdy_02(Neeraj S.Gowda)
Published on

ಮಂಡ್ಯ: 2022ನೇ ಸಾಲಿನಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ(ಮಾಜಿ ಪುರಸಭೆ) 2021-22ನೇ ಸಾಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ನೀರಜ್ ಎಸ್.ಗೌಡ 565 ಅಂಕದೊಂದಿಗೆ ಭಾರತೀಯ ಶ್ರೇಣಿಯಲ್ಲಿ 39,597ನೇ ಸ್ಥಾನ ಪಡೆದಿದ್ದಾರೆ.

ಇವರು ಮಂಡ್ಯದ ಗುತ್ತಲು ಕಾಲನಿಯ ಎ.ಸಿ.ಸ್ವಾಮಿ ಮತ್ತು ಬಿ.ಜೆ.ರೂಪಾ ದಂಪತಿ ಪುತ್ರ. ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉಚಿತ ವೈದ್ಯಕೀಯ ಸೀಟನ್ನು ಖಚಿತಪಡಿಸಿಕೊಂಡಿರುವ ಇವರು ಜಿಲ್ಲೆ ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರನ್ನು ಕಾಲೇಜಿನ ಪ್ರಾಂಶುಪಾಲ ಡಿ.ಗುರುಲಿಂಗೇಗೌಡ ಹಾಗೂ ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ಎನ್.ನಾಗೇಶ್, ಪ್ರಧಾನ ಕಾರ್ಯದರ್ಶಿ ಎಂ.ಎಲ್.ಕೃಷ್ಣೇಗೌಡ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net