ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ ಆಯ್ಕೆ

hbr (3)
Published on

ಹೆಬ್ರಿ: ಜಿಲ್ಲಾ ಜನಜಾಗೃತಿ ವೇದಿಕೆಯ ಪ್ರಥಮ ತ್ರೈಮಾಸಿಕ ಸಭೆ ಉಡುಪಿ ಅಂಬಲಪಾಡಿಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಉದ್ಘಾಟಿಸಿದರು.

ನೂತನ ಜಿಲ್ಲಾ ಜನಜಾಗೃತಿ ವೇದಿಕೆ ಸಂಘಟನಾಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಸುಜಾತ ಸುವರ್ಣ ಸತ್ಯೇಂದ್ರ ಪೈ, ಸುಧಾಕರ ಕರ್ಕೇರ, ವೃಷಭರಾಜ್, ಜಯಂತ್ ಆಯ್ಕೆಯಾದರು.

ರಾಜ್ಯ ಸಂಘಟನೆಯ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಜಿಲ್ಲಾ ಸಂಘಟನಾ ಮಾಜಿ ಅಧ್ಯಕ್ಷ ನವೀನ್ ಅಮೀನ್, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ತಾಲೂಕು ವೇದಿಕೆಯ ತಾಲೂಕು ಸಂಘಟನಾ ಅಧ್ಯಕ್ಷರಾದ ಉದಯ್ ಕುಮಾರ್ ಹೆಗ್ಡೆ ಕಾರ್ಕಳ, ಪ್ರಕಾಶ್ ಶೆಟ್ಟಿ, ಸತ್ಯಾನಂದ್ ನಾಯಕ್, ದಯಾನಂದ ಹೆಜಮಾಡಿ, ಉಮೇಶ್ ಶೆಟ್ಟಿ, ಸುಧಾಕರ ಆಚಾರ್ಯ, ಸ್ವಪ್ನಾ, ಕೃಷ್ಣಪ್ಪ, ನಿತೇಶ್ ಕೆ. ಉಪಸ್ಥಿತರಿದ್ದರು.

ಉಡುಪಿ ತಾಲೂಕು ಕಾರ್ಯದರ್ಶಿ ಸುರೇಂದ್ರ ನಾಯ್ಕ ಸ್ವಾಗತಿಸಿದರು. ಹೆಬ್ರಿ ತಾಲೂಕು ಕಾರ್ಯದರ್ಶಿ ಲೀಲಾವತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net